M S Dhoni | ಫೀಲ್ಡ್ ನಲ್ಲಿ ನನಗೆ ಎಂದೂ ಕೋಪ ಬರೋದಿಲ್ಲ
ಮಹೇಂದ್ರ ಸಿಂಗ್ ಧೋನಿ… ವಿಶ್ವ ಕ್ರಿಕೆಟ್ ನಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದವರು.
ಧೋನಿ ಮೈದಾನದಲ್ಲಿದ್ದಾಗ ಕಾಮ್ ಅಂಡ್ ಕೂಲ್ ಆಗಿ ಇರ್ತಾರೆ. ಇದನ್ನ ಸಾಕಷ್ಟು ಆಟಗಾರರು ಪದೇ ಪದೇ ಸ್ಪಷ್ಟಪಡಿಸಿದ್ದಾರೆ.
ಇದೇ ವಿಚಾರವಾಗಿ ಕಾರ್ಯಕ್ರಮದಲ್ಲಿ ಎಂ.ಎಸ್.ಧೋನಿ ಮಾತನಾಡಿದ್ದು, ಕೋಪದಿಂದ ನಾವು ಮಾಡೋದು ಏನು ಇರುವುದಿಲ್ಲ.
ಸಾಧ್ಯವಾದಷ್ಟು ನನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರತ್ನಿಸುತ್ತೇನೆ ಎಂದಿದ್ದಾರೆ.
ನಿಜ ಹೇಳಬೇಕಂದರೇ ಫೀಲ್ಡ್ ನಲ್ಲಿ ನಾವು ಯಾವುದೇ ತಪ್ಪುಗಳನ್ನು ಮಾಡಬಾರದು ಎಂದು ಮೈದಾನಕ್ಕೆ ಬರುತ್ತೇವೆ.
ಒಬ್ಬ ಆಟಗಾರ ಕ್ಯಾಚ್ ಡ್ರಾಪ್ ಮಾಡಿದ್ರೂ, ಮಿಸ್ ಫಿಲ್ಡ್ ಮಾಡಿದ್ರೂ ಅದು ಯಾಕೆ ಆಯ್ತು ಅಂತಾ ಅಲೋಚಿಸುತ್ತೇನೆ.
ಕೋಪ ಮಾಡಿಕೊಳ್ಳುವುದರಿಂದ ಮಾಡುವುದು ಏನೂ ಇರೋದಿಲ್ಲ. ಅದು ಅಲ್ಲದೇ ಮೈದಾನದಲ್ಲಿ 40 ಕ್ಕೂ ಹೆಚ್ಚು ಮಂದಿ ಸೇರಿದಂತೆ ಟಿವಿಗಳಲ್ಲಿ ಕೋಟ್ಯಾಂತರ ಮಂದಿ ಅಭಿಮಾನಿಗಳು ಮ್ಯಾಚ್ ನೋಡುತ್ತಿರುತ್ತಾರೆ.

ಯಾವುದೇ ಆಟಗಾರ ಗ್ರೌಂಡ್ ನಲ್ಲಿದ್ದೂ ಶ್ರದ್ಧೆಯಿಂದ ಇದ್ದು ಕ್ಯಾಚ್ ಡ್ರಾಪ್ ಮಾಡಿದ್ರೆ ನನಗೇನು ಅಭ್ಯಂತರವಿಲ್ಲ.
ಆದ್ರೆ ಆತ ಪ್ರಾಕ್ಟೀಸ್ ನಲ್ಲಿ ಎಷ್ಟು ಕ್ಯಾಚ್ ಗಳನ್ನು ಹಿಡಿದುಕೊಂಡರೂ, ಅದೇ ರೀತಿ ಈ ಹಿಂದೆ ಎಷ್ಟು ಕ್ಯಾಚ್ ಗಳನ್ನು ಹಿಡಿಕೊಂಡಿದ್ದರೂ ಅನ್ನೋದನ್ನ ನಾನು ನೆನಪಿಸಿಕೊಳ್ಳುತ್ತೇನೆ.
ಆದ್ರೂ ಕ್ಯಾಚ್ ಬಿಟ್ಟರೇ ಮ್ಯಾಚ್ ಸೋಲುತ್ತೇವೆ ನಿಜ, ಅದೇ ಸಮಯದಲ್ಲಿ ಫಿಲ್ಡರ್ ದೃಷ್ಠಿಯಲ್ಲೂ ಯೋಚನೆ ಮಾಡೋದು ಮುಖ್ಯ ಎಂದು ಧೋನಿ ಹೇಳಿದ್ದಾರೆ.








