ರವೆ ಇಡ್ಲಿ ಉಪಹಾರ ಕಂಡು ಹಿಡಿದಿದ್ದು MTR ! ಇದು ನಿಮಗೆ ಗೊತ್ತೆ
MTR has discovered semolina idli breakfast! You know this
ಈ ಹಿಂದೆ ನೀವು ಬ್ರಿಟಾನಿಯಾ, ಗೋದ್ರೆಜ್ ಕಂಪನಿಗಳ ಬಗ್ಗೆ ತಿಳಿದುಕೊಂಡಿರಿ. ಇಂದು ನಮ್ಮ ಕರುನಾಡಿನಲ್ಲಿ ಜನಸಿದ ಕಂಪನಿ ಬಗ್ಗೆ ತಿಳಿಯಲಿದ್ದೀರಿ. ಈ ಕಂಪನಿಯ ಹೆಸರು ನೀವು ಕೇಳದೆ ಇರಲು ಸಾಧ್ಯವೆ ಇಲ್ಲ. ಹಾಗೇ ಈ ಕಂಪನಿ ತಯಾರಿಸುವ ಆಹಾರ ಪದಾರ್ಥಗಳನ್ನು ನೀವು ತಿನ್ನದೆ ಇರಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಬಾರಿಯಾದರೂ ಈ ಕಂಪನಿಯ ಆಹಾರವನ್ನು ಸವಿದಿರುತ್ತೀರಿ. ನಮ್ಮ ರಾಜ್ಯದಲ್ಲಿ ಹುಟ್ಟಿ ಜಗತ್ತಿನಾದ್ಯಂತ ತನ್ನ ರುಚಿಕರವಾದ ಆಹಾರಗಳ ಮೂಲಕವೇ ತನ್ನತ್ತ ಸೆಳೆಯುತ್ತಿದೆ MTR.
MTR ಹೆಸರು ಕಿವಿಗೆ ಬಿದ್ದ ತಕ್ಷಣವೇ ನೆನಪಿಗೆ ಬರುವುದು ಮಸಾಲ್ ದೋಸೆ. ಇನ್ನು ಗೃಹಿಣಿಯರಿಗೆ ನೆನಪಾಗುವುದು MTR ಮಸಾಲಾ ಪೌಡರ್. ಪ್ರತಿದಿನ ಅಡುಗೆಮನೆಯಲ್ಲಿ MTR ಪ್ರಾಡಕ್ಟ್ ಅನ್ನು ಬಳಸಿ ಆದರ ರುಚಿಯನ್ನು ಸವಿದಿರುತ್ತೇವೆ.
ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ MTR ಕಂಪನಿ ಪ್ರಾರಂಭವಾಯಿತು. 1924 ರಲ್ಲಿ ಯಜ್ಞನಾರಾಯಣ ಮೈಯಾ ಅವರು ಮಾವಳ್ಳಿ ಟಿಫಿನ್ ರೂಮ್ (MTR) ಅನ್ನು ಪ್ರಾರಂಭಿಸಿದರು. ಇವರು ಮೂಲತಃ ಅಡುಗೆ ಭಟ್ಟರಾಗಿದ್ದು, ಸ್ವಂತ ಉದ್ಯೋಗ ಮಾಡಲು ನಿರ್ಧರಿಸಿ ಈ ಟಿಫಿನ್ ರೂಮ್ ಅನ್ನು ಪ್ರಾರಂಭಿಸದರು.
ಬೆಂಗಳೂರಿಗೆ ಬಂದ ಅನೇಕ ಜನರಿಗೆ ರಿಜನೇಬಲ್ ದರದಲ್ಲಿ ಉಪಹಾರವನ್ನು ನೀಡುತ್ತಿದ್ದರು. ಇವರ ಉಪಹಾರ ನಗರದಾದ್ಯಂತ ಪ್ರಸಿದ್ಧಿ ಪಡೆಯಿತು. ಈ ಕಂಪನಿಯದ್ದು ಒಂದು ನಿಯಮವಿದೆ ಅದು ಸ್ವಚ್ಛತೆ, ಕ್ವಾಲಟಿಯಲ್ಲಿ ನೊ ಕಾಂಪ್ರಮೈಸ್ ಇದು ಅವರ ಮೊದಲ ಆದ್ಯತೆಯಾಗಿದೆ. ಈ ಟಫಿನ್ ರೂಂ ಉತ್ತಮವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 1945 ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಈ ಸಮಯದಲ್ಲಿ ಅಕ್ಕಿಯ ಕೊರತೆ ದೇಶದಲ್ಲಿ ಉದ್ಭವಿಸಿತು. ಆಗ ಟಿಫಿನ್ ರೂಂಗೆ ಸ್ವಲ್ಪ ಹೊಡೆತ ಬಿತ್ತು. ಅಕ್ಕಿ ಇಲ್ಲದೆ ಇಡ್ಲಿ ಹೇಗೆ ಮಾಡುವುದು ಎಂಬ ಪ್ರಶ್ನೆ ಉದ್ಭವವಾಯಿತು.
ಆಗ ಯಜ್ಞನಾರಾಯಣ ಮೈಯಾ ರವೆಯಿಂದ ಇಡ್ಲಿ ಮಾಡುವುದನ್ನು ಕಂಡುಹಿಡಿದರು. ದೇಶದಲ್ಲೇ ಮೊದಲ ಬಾರಿಗೆ ರವೆಯಿಂದ ಇಡ್ಲಿ ಮಾಡುವುದನ್ನು ಪ್ರಾರಂಭಿಸಿದರವರು ಯಜ್ಞನಾರಾಯಣ ಮೈಯಾ ಅವರು.








