ಇದು ಟ್ರೇಲರ್ ಅಷ್ಟೇ, ಪಿಚ್ಚರ್ ಅಭಿ ಬಿ ಬಾಕಿ ಹೆ..! ಮುಖೇಶ್ ಅಂಬಾನಿಗೆ ಎಚ್ಚರಿಕೆ..!
ಏಷ್ಯಾದ ಶ್ರೀಮಂತ ರಿಲಾಯನ್ಸ್ ಒಡೆಯ ಮುಖೇಶ್ ಅಂಬಾನಿ ಮನೆಯ ಸಮೀಪ ಎಸ್ ಯುವಿ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಈ ಸುದ್ದಿ ಸದ್ಯ ಸಂಚಲನ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಸ್ಪೋಟಕ ವಿಚಾರ ಬಯೊಲಾಗಿದೆ. ಅದೇನೆಂದ್ರೆ ಸ್ಫೊಟಕಗಳು ಪತ್ತೆಯಾದ ಕಾರಿನಲ್ಲಿ ಪತ್ರ ಒಂದು ಸಿಕ್ಕಿದೆ. ಅದರಲ್ಲಿ `ಇದು ಟ್ರೇಲರ್ ಅಷ್ಟೇ’ ಎಂದು ಸೂಚನೆ ನೀಡಲಾಗಿದ್ದು, ಮುಂದೆ ಯಾವುದೋ ದೊಡ್ಡ ಗಂಡಾಂತರ ಕಾದಿದೆ ಎಂಬ ಸೂಚನೆ ನೀಡಿರುವಂತಿದೆ.
ತಮ್ಮ ನಾಯಿಗಳನ್ನ ಹುಡುಕಿಕೊಟ್ಟವರಿಗೆ 3.6 ಕೋಟಿ ರೂ. ಬಹುಮಾನ ಘೋಷಿಸಿದ ಪಾಪ್ ಸಿಂಗರ್..!
ಮುಖೇಶ್ ಅಂಬಾನಿ ಮನೆಯ ಸಮೀಪ ಎಸ್ ಯುವಿ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಈ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಕಗಳನ್ನು ಸಿದ್ಧಪಡಿಸಲು ಬಳಸಲಾಗುತ್ತದೆ. ಮುಖೇಶ್ ಅಂಬಾನಿ ಕುಟುಂಬವನ್ನು ಉದ್ದೇಶಿಸಿ ಈ ಪತ್ರ ಬರೆಯಲಾಗಿದ್ದು, ನೀತು ಬಾಬಿ ಮತ್ತು ಮುಖೇಶ್ ಭಯ್ಯಾ, ಇದು ಸಣ್ಣ ಝಲಕ್ ಅಷ್ಟೆ. ಮುಂದಿನ ಬಾರಿ ಇದು ಪೂರ್ಣ ಸಿದ್ಧವಾಗಿ ಬರುತ್ತದೆ. ಇದಕ್ಕೆ ಎಲ್ಲಾ ತಯಾರಿ ಆಗಿದೆ ಎಂದು ಎಚ್ಚರಿಕೆ ನೀಡಲಾಗಿದೆ. ದುಷ್ಕರ್ಮಿಗಳು ಸ್ವತಃ ಪೊಲೀಸರಿಗೆ ಕರೆ ಮಾಡಿ ಕಾರಿನಲ್ಲಿ ಜಿಲೆಟಿನ್ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ತಪಾಸಣೆ ಮಾಡಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.