ಕೊರೊನಾ ಸಂಕಷ್ಟದ ನಡುವೆಯೂ ಜನಪ್ರತಿನಿಧಿಗಳ ಕಾರು ಖರೀದಿಗೆ 3 ಕೋಟಿ ರೂಪಾಯಿ ಬಿಡುಗಡೆ..!

1 min read

ಕೊರೊನಾ ಸಂಕಷ್ಟದ ನಡುವೆಯೂ ಜನಪ್ರತಿನಿಧಿಗಳ ಕಾರು ಖರೀದಿಗೆ 3 ಕೋಟಿ ರೂಪಾಯಿ ಬಿಡುಗಡೆ..!

ಬೆಂಗಳೂರು: ಕೊರೊನಾದಿಂದ ದೇಶ ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದರ ನಡುವೆ ಆರ್ಥಿಕ ಸಂಕಷ್ದ ಪರಿಣಮಾವನ್ನ ಸರ್ಕಾರ ತೆರೆಗೆ ರೂಪದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಜನರ ತಲೆ ಮೇಲೆ ಹೇರುತ್ತಿದ್ದು, ಜನ ಸಮಾನ್ಯರು ಪೆಟ್ರೋಲ್ ಹಾಗೂ ಇನ್ನಿತರೇ ಅಗತ್ಯ ವಸ್ತುಗಳ ಮೇಲಿನ ದರ ಈರಿಕೆಯಿಂದ ಕಂಗಾಲಾಗಿದ್ದಾರೆ. ಆದ್ರೆ ಜನರಪ್ರತಿನಿಧಿಗಳ ಐಶಾರಾಮಿ ಜೀವನಕ್ಕೆ ಮಾತ್ರ ಯಾವುದೇ ತೊಂದರೆಯಾಗಿಲ್ಲ. ಅಷ್ಟೇ ಅಲ್ಲ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಸಚಿವರು ಹಾಗೂ ಸಂಸದರು ಐಷಾರಾಮಿ ಹೊಸ ಕಾರು ಕೊಳ್ಳಲು ಖರೀದಿಯ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ.

ಯೂಟ್ಯೂಬ್ ನಲ್ಲಿ ಹೊಸ ಫೀಚರ್ : ಮಕ್ಕಳ ಕಂಟೆಂಟ್ ವೀಕ್ಷಣೆಯನ್ನ ಪೋಷಕರೇ ನಿರ್ಧರಿಸಬಹುದು..!

ಹೌದು.. ಸಚಿವರುಗಳಿಗಾಗಿ ಸುಮಾರು 10ರಿಂದ 12 ಹೊಸ ಕಾರು ಖರೀದಿ ಮಾಡಲು 3 ಕೋಟಿ ರು ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (DPAR) ಈಗಾಗಲೇ ಪ್ರತಿ ಕಾರಿಗೆ 23 ಲಕ್ಷ ರೂ, ನಿಗದಿ ಪಡಿಸಿದೆ. ಹೆಚ್ಚಿನ ಸಚಿವರುಗಳು ಟೊಯೋಟಾ ಕ್ರಿಸ್ಟಲ್ ಹೈ ಎಂಡ್ ಮಾಡೆಲ್ ಕಾರು ಬಯಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಇದರ ಬೆಲೆ 21.7 ಲಕ್ಷ ರು, ರಾಜ್ಯ ಸರ್ಕಾರದ ವಾಹನಗಳಿಗೆ ರೋಡ್ ಟ್ಯಾಕ್ಸ್ ಇರುವುದಿಲ್ಲ, ಕಳೆದ ವರ್ಷ ಡಿಸೆಂಬರ್ನಲ್ಲಿ, ಇನ್ನೋವಾ ಕ್ರಿಸ್ಟಾದ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆ ಸುಮಾರು 23 ಲಕ್ಷ ರೂ.ಆಗಿದೆ.

`ಪೊಗರು’ ಸಿನಿಮಾ ನೋಡಿ `ಇದೊಂದು ಮೈಲಿಗಲ್ಲು’ ಎಂದ ಪ್ರಶಾಂತ್ ನೀಲ್

ಆದ್ದರಿಂದ, ಹಣದ ಮಿತಿಯನ್ನು ಹೆಚ್ಚಿಸಲು ಡಿಪಿಎಆರ್ ಅಧಿಕಾರಿಗಳು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದು ಅನುಮೋದನೆ ಪಡೆದಿದೆ.. ಇದೀಗ ರಾಜ್ಯದ 33 ಸಚಿವರು ಹಾಗೂ 28 ಸಂಸದರು ಹೊಸ ಐಷಾರಾಮಿ ಕಾರುಗಳನ್ನು ಕೊಳ್ಳಬಹುದಾಗಿದೆ. ಅದಕ್ಕೆ ಸರ್ಕಾರ ತಲಾ 23 ಲಕ್ಷ ರೂಪಾತಿಗಳನ್ನು ಒದಗಿಸಲಿದೆ. ಮೂಲಗಳ ಪ್ರಕಾರ, ಮೂವರು ಸಂಸದರು ಸೇರಿದಂತೆ 10 ರಿಂದ 12 ಕಾರುಗಳನ್ನು ಖರೀದಿಸುವ ಪ್ರಸ್ತಾಪವಿದೆ. ನಾವು ಇರುವ ಎಲ್ಲಾ ವಾಹನಗಳನ್ನು ಮಂತ್ರಿಗಳು ಮತ್ತು ಇತರ ಅಧಿಕಾರಿಗಳಿಗೆ ಕೊಟ್ಟಿದ್ದೇವೆ, ಸದ್ಯ ಯಡಿಯೂರಪ್ಪ ಸಂಪುಟದಲ್ಲಿರುವ ಎಲ್ಲಾ ಸಚಿವರುಗಳಿಗೆ ಉತ್ತಮ ಸ್ಥಿತಿಯಿರುವ ವಾಹನಗಳನ್ನು ನೀಡಿದ್ದೇವೆ, ಆದರೆ ಕೆಲವು ಸಚಿವರು ತಮ್ಮ ನೋಂದಣಿ ಸಂಖ್ಯೆ ಸರಿಯಿಲ್ಲವೆಂದು ನ್ಯೂಮರಾಲಜಿ ಪ್ರಕಾರ ಹೊಸ ಸಂಖ್ಯೆಗಾಗಿ ಹೊಸ ಕಾರು ಖರೀದಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd