Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ…
54 ವರ್ಷದ ಮಾನಸಿಕ ಅಸ್ವಸ್ಥ ಹಿರಿಯ ನಾಗರಿಕ ದಂಪತಿಗಳು ಸೇರಿದಂತೆ ಮೂವರನ್ನ ಕೊಂದಿರುವ ಘಟನೆ ದಕ್ಷಿಣ ಮುಂಬೈನ ಡಿಬಿ ಮಾರ್ಗ್ ದಲ್ಲಿ ನಡೆದಿದೆ. ಕೊಲೆ ಮಾಡಿದ ವ್ಯಕ್ತಿಯನ್ನ ಚೇತನ್ ಗಾಲಾ ಎಂದು ಗುರುತಿಸಲಾಗಿದ್ದು ಪೊಲೀಸರು ಬಂದಿಸಿದ್ದಾರೆ.
ಮಾನಸಿಕ ಅಸ್ವಸ್ಥ ಶುಕ್ರವಾರ ಮಧ್ಯಾಹ್ನ ತನ್ನ ಐವರು ನೆರೆಹೊರೆಯವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರ್ವತಿ ಮ್ಯಾನ್ಷನ್ ಕಟ್ಟಡದಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಪತ್ನಿ ಮತ್ತು ಪುತ್ರರಿಂದ ದೂರವಾಗಿದ್ದ ಚೇತನ್ ಗಾಲಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶುಕ್ರವಾರ ಮಧ್ಯಾಹ್ನ 3.40 ಕ್ಕೆ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ನೆರೆಮನೆಯವರಾದ ಜಯೇಂದ್ರ (77) ಮತ್ತು ಇಳಬಾಯಿ ಮಿಸ್ತ್ರಿ (70) ಮೇಲೆ ಹಲ್ಲೆ ನಡೆಸಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದೀ ರೀತಿ ಹಲವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.
ಇಡೀ ಘಟನೆ ಸುಮಾರು ಅರ್ಧಗಂಟೆ ನಡೆದಿದೆ. ಸ್ಥಳಿರೊಬ್ಬ ಪೊಲೀಸರಿಗೆ ಕರೆ ಮಾಡಿದ ನಂತರ ಪೊಲೀಸರ ತಂಡ ಆಗಮಿಸಿ ಆರೋಪಿಯನ್ನ ಸೆರೆಹಿಡಿದಿದೆ. ಚೇತನ್ ಗಾಲಾ ನಿರುದ್ಯೋಗಿಯಾಗಿದ್ದು, ಅವನು ಬಾಡಿಗೆ ಕೊಟ್ಟಿದ್ದ ಅಂಗಡಿಯ ಆದಾಯದ ಮೂಲಕ ಜೀವಿಸುತ್ತಿದ್ದ ಎಂದು ತಿಳಿದುಬಂದಿದೆ.
Mumbai: A mentally ill man who stabbed three people to death; Shocked Mumbai…