ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
1 min read
ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
ಅಶ್ಲೀಲ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದ ಗುಂಪನ್ನ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಚಂದಾದಾರಿಕೆ ಆಧಾರದ ಮೇಲೆ ಜನತೆಗೆ ನೀಲಿ ಚಿತ್ರಗಳನ್ನ ಹಂಚಿಕೆ ಮಾಡುವ ಕೆಲಸವನ್ನ ಮಾಡುತ್ತಿತ್ತು. ಒಂದು ವಾರಕ್ಕೆ ಒಂದು ನೀಲಿ ಚಿತ್ರದ ಎಪಿಸೋಡ್ ನ್ನ ರಿಲೀಸ್ ಮಾಡಲಾಗುತ್ತಿತ್ತು. ಒಟಿಟಿ ವೇದಿಕೆಯ ಮಾದರಿಯಲ್ಲೇ ಚಂದಾದಾರರಿಗೆ ವಾರಕ್ಕೊಂದು ಎಪಿಸೋಡ್ ಗಳನ್ನ ಪ್ರದರ್ಶಿಸಲಾಗುತ್ತಿತ್ತು. ಚಂದಾದಾರರು ಅಪ್ಲಿಕೇಶನ್ ಒಂದನ್ನ ಡೌನ್ ಲೋಡ್ ಮಾಡಿಕೊಂಡು ಈ ನೀಲಿ ಚಿತ್ರಗಳನ್ನ ವೀಕ್ಷಣೆ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ ಇದರಲ್ಲಿ ನಟರೊಬ್ಬರು ಶಾಮೀಲಾಗಿದ್ದಾರೆ ಎನ್ನಲಾಗಿದೆ. ಬಂಧನಕ್ಕೊಳಗಾದ ತಂಡದ ಅಪ್ಲಿಕೇಶನ್ಗೆ ಪ್ರತಿ ತಿಂಗಳು 199 ರೂಪಾಯಿ ಪಾವತಿ ಮಾಡಬೇಕಿತ್ತು. ಈ ಅಪ್ಲಿಕೇಶನ್ಗೆ ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು 2 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಕೊರೊನಾ ಎಫೆಕ್ಟ್ : ಮಾರ್ಚ್ 7ರವರೆಗೆ ಶಾಲೆ-ಕಾಲೇಜು ಬಂದ್
ಇನ್ನೂ ಪೊಲೀಸರು ದಾಳಿ ನಡೆಸಲು ಸ್ಥಳಕ್ಕೆ ತೆರಳಿದ್ದ ವೇಳೆಯೂ ಶೂಟಿಂಗ್ ನಡೆಯುತ್ತಲೇ ಇತ್ತು. ವೆಬ್ಸಿರೀಸ್ನಲ್ಲಿ ಭಾಗಿ ಮಾಡಿಕೊಳ್ಳುವ ಆಮೀಷವನ್ನೊಡ್ಡಿ ಆಕೆಯನ್ನ ಶೂಟಿಂಗ್ ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಆದರೆ ಆಕೆಗೆ ಶೂಟಿಂಗ್ ಸ್ಥಳಕ್ಕೆ ಬಂದ ಬಳಿಕ ಇದೊಂದು ನೀಲಿ ಚಿತ್ರದ ಗ್ಯಾಂಗ್ ಎಂಬ ವಿಚಾರ ತಿಳಿದಿದ್ದು, ಆಕೆಯನ್ನೂ ಸಹ ಪೊಲೀಸರು ಈ ಗ್ಯಾಂಗ್ ನಿಂದ ಬಚಾವ್ ಮಾಡಿದ್ದಾರೆ. ಸೂಕ್ತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು ನೀಲಿ ಚಿತ್ರದ ಕತೆ, ಮೊಬೈಲ್ ಕ್ಯಾಮರಾ, ಲೈಟ್ಸ್ ಹಾಗೂ ಇನ್ನೂ ವಿವಿಧ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.