ಹ್ಯಾಟ್ರಿಕ್ ಬೇಟೆಯಲ್ಲಿ ರೋಹಿತ್ ಪಡೆ
ಐಪಿಎಲ್ ಮೋಸ್ಟ್ ಸಕ್ಸಸ್ ಫುಲ್ ಟೀಂ ಮುಂಬೈ ಇಂಡಿಯನ್ಸ್ ಈ ಬಾರಿಯ ಕಪ್ ಗೆಲ್ಲೋ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡೋ ತವಕದಲ್ಲಿದೆ. 2019, 2020ನೇ ಸಾಲಿನ ಐಪಿಎಲ್ ಕಪ್ ಗೆದ್ದಿರೋ ರೋಹಿತ್ ಪಡೆ ಈ ಬಾರಿ ಕಪ್ ಗೆ ಮುತ್ತಿಟ್ಟು ಇದುವರೆಗೂ ಯಾವುದೇ ಐಪಿಎಲ್ ತಂಡ ಮಾಡದ ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದೆ. ಆದ್ರೆ ಬದಲಾದ ಸಂದರ್ಭ, ಸನ್ನಿವೇಷಗಳಲ್ಲಿ ಮುಂಬೈ ಕಪ್ ಗೆಲ್ಲುತ್ತಾ..? ರೋಹಿತ್ ಪಡೆ ಮೊದಲಿನಷ್ಟು ಸ್ಟ್ರಾಂಗ್ ಈಗಲೂ ಇದ್ಯಾ..? ಮುಂಬೈ ಇಂಡಿಯನ್ಸ್ ನ ಬಲಾಬಲಗಳೇನು..? ಯಾವುದು ಬೆಸ್ಟ್ ಇಲವೆನ್..? ಮುಂದೆ ಓದಿ..
ಮೊದಲು ಮುಂಬೈ ಇಂಡಿಯನ್ಸ್ ನ ಟ್ಯ್ಯಾಕ್ ರೆಕಾರ್ಡ್ ನೋಡೋದಾದ್ರೆ ಮೊದಲು ಎರಡು ಐಪಿಎಲ್ ನಲ್ಲಿ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. 2010ರಲ್ಲಿ ಫೈನಲ್ ಹಂತಕ್ಕೆ ಬಂದ್ರೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲುನುಭವಿಸಿತು. ಬಳಿಕ 2013ರಲ್ಲಿ ರೋಹಿತ್ ಶರ್ಮಾ ನಾಯಕಪಟ್ಟ ಅಲಂಕರಿಸಿದ ಬಳಿಕ ಮುಂಬೈಗೆ ಪ್ರಶಸ್ತಿ ಒಳಿದುಬಂತು. ಅಂದಿನಿಂದ ಈಗಿನವರೆಗೂ ಮುಂಬೈ ಪ್ರತಿಬಾರಿ ಮುಂಬೈ ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡ. ಇನ್ನು ಮುಂಬೈದ ಟ್ರೆಂಡ್ ಹೇಗಿತ್ತು ಅಂದ್ರೆ ಒಂದು ವರ್ಷ ಬಿಟ್ಟು ಇನ್ನೊಂದು ವರ್ಷ ಕಪ್ ಗೆಲ್ಲುತ್ತಿತ್ತು. ಅಂದ್ರೆ 2013, 2015 ,2017, 2019 ಹೀಗೆ ಕಪ್ ಗಳನ್ನ ಗೆದ್ದಿತ್ತು. ಆದ್ರೆ ಈ ಟ್ರೆಂಡನ್ನ ಬ್ರೇಕ್ ಮಾಡಿ ಕಳೆದ ಬಾರಿ ಕಪ್ ಗೆದ್ದುಕೊಳ್ತು. ಆ ಮೂಲಕ ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದು ಈಗ ಹ್ಯಾಟ್ರಿಕ್ ಗೆಲುವಿಗೆ ಕಾಯುತ್ತಿದ್ದಾರೆ.
ಸ್ಮಾರ್ಟ್ ಬೆಡ್ಡಿಂಗ್
ಈ ಬಾರಿಯ ಬೆಡ್ ನಲ್ಲಿ ಮುಂಬೈ ತುಂಬಾ ಸ್ಟಾರ್ಟ್‍ಆಗಿ ಬೆಡ್ ಮಾಡಿದೆ. ಮುಂಬೈ ಬಳಿ 15 ಕೋಟಿ ಮಾತ್ರ ಇತ್ತು. ಈ ಮೊತ್ತದಲ್ಲಿ ಮೂವರು ವಿದೇಶಿ ಬೌಲರ್ ಗಳನ್ನ ಖರೀದಿ ಮಾಡಬೇಕಿತ್ತು. ಆದ್ರೆ ವಿದೇಶಿ ಬೌಲರ್ ಗಳಿಗೆ ಹರಾಜಿನಲ್ಲಿ ಹೆಚ್ಚು ಬೇಡಿಕೆ ಇತ್ತು. ಇದನ್ನ ಮನಗಂಡ ಮುಂಬೈ ಪ್ಲಾನ್ ಬಿ ಮೊರೆ ಹೋಗಿ, ಆಡಂ ಮಿಲ್, ನಾಥನ್ ಕೌಲ್ಟರ್ ನೀಲ್, ಮಾರ್ಕೋ ಜೆನ್ಸನ್, ನಿಶಾಮ್ ಅವರನ್ನ ಬೇಸ್ ಪ್ರೈಸ್ ಗೆ ಖರೀದಿ ಮಾಡಿದೆ.
ಇದರಲ್ಲಿ ಮಾರ್ಕೊ ಜೆನ್ಸನ್ ಬೆಸ್ಟ್ ಪಿಕ್ ಅಂತಾನೇ ಹೇಳಬಹುದು. ಯಾಕೆಂದ್ರೆ ಈ ಸೌತ್ ಆಫ್ರಿಕಾ ಯಂಗ್ ಬೌಲರ್ ದೇಶಿ ಟೂರ್ನಿಗಳಲ್ಲಿ ತುಂಬಾ ಇಂಪ್ರಸ್ಸೀವ್ ಆಗಿದ್ದಾರೆ. ಲೆಫ್ಟ್ ಹ್ಯಾಂಡ್ ಬೌಲರ್, ಬ್ಯಾಟಿಂಗ್ ಕೂಡ ಮಾಡುವ ಸಾಮಥ್ರ್ಯ ಹೊಂದಿದ್ದಾನೆ. ಈ ಹಿಂದೆ ಟೀಂ ಇಂಡಿಯಾ ಸೌತ್ ಆಫ್ರೀಕಾ ಪ್ರವಾಸ ಕೈಗೊಂಡಾಗ ನೆಟ್ ಬೌಲರ್ ಆಗಿದ್ದ ಜೆನ್ಸನ್ ವಿರಾಟ್ ರ ವಿಕೆಟ್ ತೆಗೆದಿದ್ರು. ಅಂದ್ರೆ ಇಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೆಜ್ ಮೆಂಟ್ ಹೇಗೆ ಬುಮ್ರಾ, ಪಾಂಡ್ಯಾ ಬದರ್ಸ್ ಅನ್ನ ಮೂಲ ಬೆಲೆಗೆ ಖರೀದಿ ಮಾಡಿತ್ತೋ ಅದೇ ರೀತಿ ಜೆನ್ಸನ್ ಅವರನ್ನ ಪಿಕ್ ಮಾಡಿದೆ. ಇನ್ನುಳಿದಂತೆ ಅರ್ಜುನ್ ತೆಂಡುಲ್ಕರ್, ಯುದ್ವೀರ್ ಸಿಂಗ್, ಪಿಯೂಷ್ ಚಾವ್ಲಾ ಅವರನ್ನ ಖರೀದಿ ಮಾಡಿದ್ದಾರೆ.
ಟೀಂ ಸುದ್ದಿಗೆ ಬಂದ್ರೆ
ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಸೌರಬ್ ತಿವಾರಿ, ಕ್ರಿಸ್ ಲೀನ್ ತಂಡಕ್ಕೆ ಬಲ ತುಂಬಲಿದ್ದಾರೆ.
ಇನ್ನ ಹಾರ್ಧಿಕ್ ಪಾಂಡ್ಯ, ಕೃನಾಲ್ ಪಾಂಡ್ಯಾ, ಕಿರಾನ್ ಪೋಲಾರ್ಡ್ ಮುಂಬೈನ ಆಧಾರ ಸ್ತಂಬಗಳಾದ್ರೆ ಇವರಿಗೆ ಬ್ಯಾಕ್ ಅಪ್ ಆಗಿ ಅನುಕುಲ್ ರಾಯ್, ಜೇಮ್ಸ್ ನಿಶಾಮ್, ಮಾರ್ಕೊ ಜೆನ್ಸನ್, ಅರ್ಜುನ್ ತೆಂಡುಲ್ಕರ್ ಇದ್ದಾರೆ.
ಡಿ ಕಾಕ್, ಇಶಾನ್ ಕಿಶಾನ್, ಆದಿತ್ಯಾ ತಾರೆ ವಿಕೆಟ್ ಕೀಪರ್ ಗಳಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ರಾಹುಲ್ ಚಹಾರ್, ಜಯಂತ್ ಯಾದವ್, ಪಿಯೂಷ್ ಚಾವ್ಲಾ.
ಪೇಸ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ದವಾನ್ ಕುಲಕರ್ಣಿ, ಬೂಮ್ರಾ ಫ್ರಂಟ್ ಲೈನ್ ಅಸ್ತ್ರಗಳಾಗಿದ್ದಾರೆ.
ಸಾಮಾನ್ಯವಾಗಿ ಮುಂಬೈ ತಂಡ ತನ್ನ ಸ್ಟ್ರೆಂಥ್ ಗೆ ತಂಡವನ್ನ ಪಿಕ್ ಮಾಡ್ತಿತ್ತು. ಅಂದ್ರೆ ವಾಂಖೆಡೆ ಮೈದಾನ ಪಾಸ್ಟ್ ಬೌಲಿಂಗ್ ಮತ್ತು ಬ್ಯಾಟಿಂಗ್ ಗೆ ನೆರವಾಗುವಂತೆ ಬಿಗ್ ಹಿಟ್ಟರ್ ಗಳನ್ನ ತಂಡದಲ್ಲಿ ಸೇರಿಕೊಳ್ಳುತ್ತಿತ್ತು. ಆದ್ರೆ ಈ ಬಾರಿ ಮುಂಬೈನಲ್ಲಿ ತಂಡಗಳನ್ನ ಆಡುತ್ತಿಲ್ಲ. ಬರೋಬ್ಬರಿ 9 ನಪಂದ್ಯಗಳನ್ನ ಸ್ಲೋ ಪಿಚ್ ಗಳಾಂತಹ ಚೆನ್ನೈ ಮತ್ತು ದೆಹಲಿಯಲ್ಲಿ ಆಡುತ್ತಿದೆ. ಈ ಮೈದಾನಗಳು ಸ್ಲೋ ಪಿಚ್ ಆಗಿರುವುದರಿಂದ ಎಲ್ಲೊ ಒಂದು ಕಡೆ ಮುಂಬೈಗೆ ಕಿಕ್ ಬ್ಯಾಕ್ ಆಗಬಹುದು. ಯಾಕೆಂದ್ರೆ ಇಂತಹ ಪಿಚ್ ಗಳಲ್ಲಿ ಪಾಸ್ಟ್ ಬೌಲರ್ ಗಳಲ್ಲಿ ವೇರಿಯೇಷನ್ಸ್ ಬೇಕಾಗಿರುತ್ತೆ. ಭುವನೇಶ್ವರ್ ಕುಮಾರ್ ತರ ಸ್ಪೀಡ್ ನಲ್ಲಿ ವೆರೈಟಿ ಡಿಲಿವರಿಸ್ ಇರಬೇಕಾಗುತ್ತೆ. ಆದ್ರೆ ಮುಂಬೈ ಬೌಲರ್ ಗಳ ಬಳಿ ಈ ರೀತಿಯ ಬೌಲರ್ ಗಳ ಕೊರತೆ ಇದೆ. ಈ ಪಿಚ್ ಗಳಲ್ಲಿ ಚಾವ್ಲಾ ಅವರನ್ನ ಆಡಿಸಬಹುದು.
ಬೆಸ್ಟ್ ಇಲೆವೆನ್ :
ಮುಂಬೈ ಇಂಡಿಯನ್ಸ್ ವಿಚಾರವಾದಲ್ಲಿ ಬೆಸ್ಟ್ ಇಲವೆನ್ ಪಿಕ್ ಮಾಡೋದು ತುಂಬ ಸುಲಭ. ಯಾಕೆಂದ್ರೆ ಅವರಲ್ಲಿ ಹೆಚ್ಚಾಗಿ ಬದಲಾವಣೆಗಳು ಇರೋದಿಲ್ಲ.
ಡಿ ಕಾಕ್
ರೋಹಿತ್ ಶರ್ಮಾ
ಇಶಾನ್ ಕಿಶಾನ್
ಸೂರ್ಯಕುಮಾರ್ ಯಾದವ್
ಕಿರಾನ್ ಪೊಲಾರ್ಡ್
ಹಾರ್ಧಿಕ್ ಪಾಂಡ್ಯ
ಕೃನಾನ್ ಪಾಂಡ್ಯ
ನಾಥನ್ ಕೌಲ್ಟರ್ ನೇಲ್
ಟ್ರೆಂಟ್ ಬೋಲ್ಟ್
ಬೂಮ್ರಾ
ರಾಹುಲ್ ಚಹಾರ್
ವಿನ್ನಿಂಗ್ ಚಾನ್ಸಸ್
ಮೊದಲ ಒಂಭತ್ತು ಪಂದ್ಯಗಳಲ್ಲಿ ಅವರು ಹೇಗೆ ಪ್ರದರ್ಶನ ನೀಡ್ತಾರೆ ಅನ್ನೋದ್ರ ಮೇಲೆ ಈ ಬಾರಿ ಕಪ್ ಹೊಡೀತಾರಾ ಇಲ್ಲವಾ ಅಂತ ಗೊತ್ತಾಗಲಿದೆ. ಇನ್ನ ತಂಡದ ವಿಚಾರಕ್ಕೆ ಬಂದ್ರೆ ಬ್ಯಾಟಿಂಗ್ ನಲ್ಲಿ ಇರುವಷ್ಟು ಧಮ್ ಬೌಲಿಂಗ್ ನಲ್ಲಿ
ಕಾಣ್ತಿಲ್ಲ.
