ಮುಂಬೈನಲ್ಲಿ ಅಗ್ನಿ ಅವಘಡ –ಪ್ರಾಣ ಉಳಿಸಿಕೊಳ್ಳಲು ಮಹಡಿಯಿಂದ ಹಾರಿದ ವ್ಯಕ್ತಿ.
ಮಹರಾಷ್ಟ್ರದ ನವೀ ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.. ಲೋವರ್ ಪರೇಲ್ ಏರಿಯಾದ ಅವಿಜ್ಞಾ ಪಾರ್ಕ್ ಅಪಾರ್ಟ್ಮೆಂಟ್ನ 19ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನವನ್ನ ನಡೆಸುತ್ತಿವೆ..
ಇಂದು ಮಧ್ಯಾಹ್ನ 12 ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ…ಅಪಾರ್ಟ್ಮೆಂಟ್ ನ ಕಿಟಕಿಯಿಂದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ಹೋಗಿ ಮೇಲಿನಿಂದ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಅಪಾರ್ಟ್ಮೆಂಟ್ ನ ಒಳಗಡೆ ಎಷ್ಟು ಜನ ಸಿಲುಕಿದ್ದಾರೆ ಎನ್ನುವ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
#Mumbai: Major fire broke out at Currey Road’s Avighna Park building. The fire broke out on the 19th floor of the 60-floor underconstruction tower.
Fire fighting and rescue Ops underwy. pic.twitter.com/Ej7SK7a6m2— Subodh Kumar (@kumarsubodh_) October 22, 2021