ಮುಂಬೈ ನಮ್ಮದು : ಠಾಕ್ರೆಗೆ ಸವದಿ ಟಕ್ಕರ್
ಚಿಕ್ಕೋಡಿ : ಮುಂಬೈ ನಮ್ಮದು. ಮುಂಬೈ ಕರ್ನಾಟಕ ಭಾಗದ ಜನತೆಗೆ ಮುಂಬೈ ಮೇಲೆ ಹಕ್ಕಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಂಬೈ ಕರ್ನಾಟಕದವರು.
ಮುಂಬೈ ಮೇಲೆ ನಮಗೂ ಹಕ್ಕಿದೆ. ಅದಕ್ಕೆ ಈಗಿನಿಂದಲೇ ಬೇಡಿಕೆ ಇಡಲು ಪ್ರಾರಂಭ ಮಾಡುತ್ತೇವೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು.
ನಮ್ಮ ಹಕ್ಕು ಸಿಗುವವರೆಗೂ ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಎಂಇಎಸ್ ಬಗ್ಗೆ ಮಾತನಾಡಿದ ಅವರು, ಎಂಇಎಸ್ ನಲ್ಲಿರುವವರನ್ನೆಲ್ಲ ಬಿಜೆಪಿಗೆ ಸೇರಿಸಿಕೊಂಡು ಅದನ್ನ ಮುಗಿಸುತ್ತೇವೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel