ಮುಂಬೈನಲ್ಲೊಂದು ಮನಕಲಕುವ ಘಟನೆ : ಮಗ ಬದುಕಿದ್ದಾನೆಂದು ಶವದ ಜೊತೆ ಕಾಲ ಕಳೆದ ತಾಯಿ..!
ಮುಂಬೈ: ಬಾತ್ ರೂಮಿನಲ್ಲಿ ಬಿದ್ದು, ಮೃತಪಟ್ಟಿದ್ದ ಮಗ , ಬದುಕಿದ್ದಾನೆ ಎಂದು ಭಾವಿಸಿ 70 ವರ್ಷದ ವೃದ್ಧ ಮಹಿಳೆಯೊಬ್ಬಳು ಇಡೀ ರಾತ್ರಿ ಶವದ ಜೊತೆಗೆ ಕಾಲ ಕಳೆದಿದ್ದಾರೆ. ಮೃತಪಟ್ಟ 42 ವರ್ಷದ ವ್ಯಕ್ತಿ ಮೇಘಾಲಯದ ಮೂಲದವನಾಗಿದ್ದಾನೆ. ಕಲಿನಾ ಪ್ರದೇಶದಲ್ಲಿರುವ ಮನೆಯಲ್ಲಿ ಇವರು ವಾಸವಾಗಿದ್ದರು. ಮಗ ಕಂಠ ಪೂರ್ತಿ ಕುಡಿದು ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದು ಒದ್ದಾಡಿದ್ದಾನೆ. ಇದನ್ನ ಕಂಡ ಆತನ ತಾಯಿ ಆತನನ್ನ ಎಳೆದುಕೊಂಡು ಹೋಗಿ ಬೆಡ್ ಮೇಲೆ ಮಲಗಿಸಿ, ಗಾಯಗೊಂಡಿದ್ದ ಆತನಿಗೆ ಅರಿಶಿನದ ಪುಡಿ ಹಚ್ಚಿದ್ದಾಳೆ.
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !
ಮಾರನೇ ದಿನ ಮುಂಜಾನೆ ಮಗ ಎಚ್ಚರಗೊಳ್ಳದಿರುವುದನ್ನು ಕಂಡು ಗಾಬರಿಯಿಂದ ಮಹಿಳೆ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಸಂಬಂದಿಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ಬಳಿಕ ಆತನ ಮೃತಪಟ್ಟಿದ್ದು ಖಚಿತವಾಗಿದೆ. ತನಿಖೆ ವೇಳೆ ಮೃತವ್ಯಕ್ತಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದು, ಆತನ ಕುಟುಂಬವು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಿಚಾರ ತಿಳಿದು ಬಂದಿದೆ. ಸದ್ಯ ಪ್ರಾಥಮಿಕ ಮಾಹಿತಿಯ ಪ್ರಕಾರ, ವ್ಯಕ್ತಿ ಸಾವು ಆಕಸ್ಮಿಕ ಸಾವು ಎಂಬ ಕಾರಣದಡಿ ಪ್ರಕರಣ ದಾಖಲಾಗಿದೆ.