ಪಿಜ್ಜಾ ಮೇಲೆ ಪೈನಾಪಲ್ OK ಬಟ್ ಗದ್ದದ ಮೇಲೆ ಮಾಸ್ಕ್ NOT OK …!

1 min read
mumbai police saaksha tv.com

ಪಿಜ್ಜಾ ಮೇಲೆ ಪೈನಾಪಲ್ OK ಬಟ್ ಗದ್ದದ ಮೇಲೆ ಮಾಸ್ಕ್ NOT OK …!

ಪಿಜ್ಜಾ….. ಯಾರಿಗೆ ತಾನೆ ಇಷ್ಟ ಇರೋದಿಲ್ಲ. ಒಬ್ಬಬ್ಬರಿಗೂ ಒಂದೊಂದು ವೆರೈಟಿ ಇಷ್ಟ ಇರುತ್ತೆ. ಆದ್ರೆ ಯಾವತ್ತಾದ್ರೂ ನೀವು ಪೈನಾಪಲ್ ಪಿಜ್ಜಾ ಬಗ್ಗೆ ಕೇಳಿದ್ದೀರಾ.. ಬಿಡಿ ಪೈನಾಪಲ್ ಪಿಜ್ಜಾ ಎಲ್ಲಾದ್ರೂ ಹೋಗ್ಲಿ. ಬಿರಿಯಾನಿ ಜೊತೆಗೆ ಏಲಕ್ಕಿ ಕಾಂಬಿನೇಷನ್ ಹೇಗಿರುತ್ತೆ. ಆದ್ರೆ ಮುಂಬೈ ಪೊಲೀಸರು ಈ ಪೈನಾಪಲ್ ಪಿಜ್ಜಾದ ಮೂಲಕವೂ ಮಾಸ್ಕ್ ಜಾಗೃತಿ ಮೂಡಿಸ್ತಿದ್ದಾರೆ.

ಹೇಗೆ ಗೊತ್ತಾ…? ಇದನ್ನ ಕೇಲಿದ್ರೆ ಮುಂಬೈ ಪೊಲೀಸರು ಸೂಪರ್ ಸ್ಮಾರ್ಟ್ ಅನ್ಸುತ್ತೆ. ಪಿಜ್ಜಾ ಮೇಲೆ ಪೈನಾಪಲ್ ಓಕೆ, ಬಟ್ ಗದ್ದದ ಮೇಲೆ ಮಾಸ್ಕ್ …. ಇಂತಹ ಒಂದು ಟ್ಯಾಗ್ ಲೈನ್ ಕೊಟ್ಟು ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪಿಜ್ಜಾ ಫೋಟೋ ಪೋಸ್ಟ್ ಮಾಡಿರೋದು ಮುಂಬೈ ಪೊಲೀಸರು. ಇದರ ಅರ್ಥ ಪಿಜ್ಜಾ ಮೇಲೆ ಪೈನಾಪಲ್ ಇದ್ರು ನಡೆಯುತ್ತೆ. ಬಿರಿಯಾನಿಯಲ್ಲಿ ಏಲಕ್ಕಿ ಇದ್ರು ಓಕೆ, ಅವಕೋಡೋ ಚಾಕಲೇಟ್ ಕಾಂಬಿನೇಷನ್ ಇದ್ರು ಪರವಾಗಿಲ್ಲ ಆದ್ರೆ ಮಾಸ್ಕ್ ಮೂಗು ಮತ್ತೆ ಬಾಯಿಯನ್ನ ಕವರ್ ಮಾಡಿರಲ್ಲ ಅಂದ್ರೆ ಅದು ತಪ್ಪಾಗುತ್ತೆ ಅದನ್ನ ಒಪ್ಪಲಾಗುವುದಿಲ್ಲ ಎಂದು. ಸೋ ಪಿಜ್ಜಾ ಮೂಲಕವೇ ಜಾಗೃತಿ.. ಬಟ್ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ… ಸದ್ಯ ಸಾಮಾಜಿಕ ಜಾಲತಣದಲ್ಲಿ ಮುಂಬೈ ಪೊಲೀಸರ ಈ ಟ್ವೀಟ್ ಭಾರೀ ವೈರಲ್ ಆಗ್ತಿದ್ದು, ನೆಟ್ಟಿಗರು ವಾ ವಾ ಎನ್ನುತ್ತಿದ್ದಾರೆ.mumbai police saaksha tv.com

ಹೌದು ಒಂದಕ್ಕೊಂದು ಸಂಬಂಧವೇ ಇಲ್ಲದ ಆಹಾರದ ಕಾಂಬೋ ಮಿಕ್ಸ್ ಮಾಡಿ ಪಿಜ್ಜಾ ಆನ್ ಪೈನಾಪಲ್ ಓಕೆ ಬಟ್ ಮಾಸ್ಕ್ ಆನ್ ಚಿನ್ ನಾಟ್ ಓಕೆ. ಬಿರಿಯಾನಿ ಅಂಡ್ ಇಲಾಯಿಚಿ ಅವಾಕಾಡೋ ಅಂಡ್ ಚಾಕೊಲೇಟ್ ಓಕೆ ಬಟ್ ಮಾಸ್ಕ್ ಆನ್ ಚಿನ್ ನಾಟ್ ಓಕೆ ಎಂದು ನಾಲ್ಕ ಬಗೆಯ ಫೋಟೋಗಳನ್ನ ಕೊಲ್ಯಾಜ್ ಮಾಡಿ ಶೇರ್ ಮಾಡಿ ನೆಟ್ಟಿಗರ ಹುಬ್ಬೇರಿಸಿದ್ದಾರೆ.

ಪ್ರತಿ ಆಹಾರಕೆ, ಆಹಾರ ಪದ್ದತಿಗೆ ಅದರದ್ದೇ ಆದ ಕಾಂಬಿನೇಷನ್ ಫ್ಲೇವರ್ಸ್ ಇರುತ್ತೆ. ಒಂದಕೊಂದು ಸಂಬವಿಲ್ಲದ ಕಾಂಬೋ ಯಾರೂ ಕೂಡ ಲೈಕ್ ಮಾಡೋದಿಲ್ಲ. ಅಂತಹ ಕಾಂಬೋ ಸಿಗೋದು ಡೌಟೇ ಆದ್ರೆ ಇಂತಹ ಕಾನ್ಸೆಪ್ಟ್ ಮೂಲಕವೂ ಜಾಗೃತಿ ಮೂಡಿಸಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ಮುಂಬೈ ಪೊಲೀಸರು.

ಇನ್ನೂ ವೆರೈಟಿಯಾಗಿ ಜಾಗೃತಿ ಮೂಡಿಸಿರುವುದ ಇದೇ ಮೊದಲೇನಲ್ಲ ಮುಂಬೈ ಪೊಲೀಸರು ಮಹಾಶಿವರಾತ್ರಿ ದಿನವೂ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದ ಫೋಟೋ ನೆಟ್ಟಿಗರನ್ನ ನಗಿಸಿದ್ರೂ ಜಾಗೃತಿ ಮೂಡಿಸದ್ದು ಸುಳ್ಳಲ್ಲ. ಹೌದು ಬಮ್ ಬಮ್ ಭೋಲೇ ಮಾಸ್ಕ್ ಕಭಿ ನಹೀ ಭೂಲೇ. ಶಿವನಿಗೆ ಜೈಕಾರ ಹಾಕಿ ಮಾಸ್ಕ್ ಯಾವತ್ತೂ0 ಮಾರಿಬೇಡಿ ಅಂತಲೂ ಎಂದೂ ಪೋಸ್ಟ್ ಮಾಡಿದ್ದರು.

ತಾಜ್ ಮಹಲ್ ನಲ್ಲಿ ಶಿವನಪೂಜೆ : ಮೂವರ ಬಂಧನ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd