Mumbai : ಗೆಳತಿ ಸಾವಿಗೆ ನ್ಯಾಯ ಸಿಗದಕ್ಕೆ 6 ನೇ ಮಹಡಿಯಿಂದ ಜಿಗಿದ ವ್ಯಕ್ತಿ..!! Video
ಅತ್ಯಾಚಾರಕ್ಕೆ ಒಳಗಾಗಿ ಸಾವನಪ್ಪಿದ್ದ ಯುವತಿಗೆ , ಘಟನೆ ನಡೆದು 5 ವರ್ಷಗಳೇ ಕಳೆದರೂ ನ್ಯಾಯ ಸಿಗದ ಕಾರಣಕ್ಕೆ ಆಕೆಯ ಬಾಯ್ ಫ್ರೆಂಡ್ 6 ನೇ ಮಹಡಿಯಿಂದ ಜಿಗಿದಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ..
ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯದ 6 ನೇ ಮಹಡಿಯಿಂದ ಈತ ಕೆಳಗೆ ಜಿಗಿದಿದ್ದಾನೆ. ಮೇಲಿಂದ ಜಿಗಿದಾಗ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದೆ.. ಆದ್ರೆ ಸೇಫ್ಟಿ ನೆಟ್ ಇದ್ದಿದ್ದರಿಂದ ಆತ ಬದುಕುಳಿದಿದ್ದಾನೆ.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ರಕ್ಷಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಬೀಡ್ ಜಿಲ್ಲೆಯ ನಿವಾಸಿ ಬಾಪು ನಾರಾಯಣ ಮೊಕಾಶಿ ಎಂದು ಗುರುತಿಸಲಾಗಿದೆ.
ಈತ ತನ್ನ ಗೆಳತಿ ಮೇಲೆ ಅತ್ಯಾಚಾರವಾಗಿದ್ದು, ಆಕೆ 2018ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದಿನಿಂದ ತನ್ನ ಗೆಳತಿಗೆ ಸಾವಿಗೆ ನ್ಯಾಯ ದೊರಕಿಸಿಕೊಡಲು ನಿರಂತರವಾಗಿ ಹೋರಾಡುತ್ತಿದ್ದೇನೆ. ಆದರೆ ಯಾವುದೇ ಬೆಳವಣಿಗೆಯಾಗಿಲ್ಲ ಪ್ರಕರಣದ ಬಗ್ಗೆ ಪೊಲೀಸರು ಸೂಕ್ತವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಮನನೊಂದು ಇಂತಹದೊಂದು ಕೆಲಸಕ್ಕೆ ಮುಂದಾಗಿದ್ದಾನೆ..
43-year-man from #Beed district who jumped from 6th floor of #Mantralaya & fell on the safety net was rescued by police & sent to a local hospital as he suffered an injury on his forehead. He had jumped seeking further probe & justice into the death of his partner: Police#Mumbai pic.twitter.com/3mlrUmlquy
— Hate Detector 🔍 (@HateDetectors) November 17, 2022
mumbai , viral , man jumped from 6th floor seeking justice for girlfriend’s death , saakshatv








