26/11 ಮುಂಬೈ ಭಯೋತ್ಪಾದನಾ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು ಎಂದು ಮುಂಬೈ ಮಾಜಿ ಪೊಲೀಸ್ ಕಮಿಷನರ್ ರಾಕೇಶ್ ಮರಿಯಾ ಮುಂಬೈ ದಾಳಿಯ ಕೆಲವು ಸ್ಪೋಟಕ ಅಂಶಗಳನ್ನು ಬಹಿರಂಗ ಪಡಿಸಿದ್ದಾರೆ
“ ಲೆಟ್ ಮಿ ಸೇ ಇಟ್ ನೌ” ಎಂಬ ಪುಸ್ತಕದಲ್ಲಿ 26/11ರ ದಾಳಿ ಹಿಂದಿರುವ ಐಎಸ್ ಐ ಮತ್ತು ಲಷ್ಕರ್ ಎ ತೊಯ್ಬಾ ನಡೆಸಿದ ಸಂಚಿನ ಬಗ್ಗೆ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಬರೆದಿರುವುದಾಗಿ ವರದಿ ತಿಳಿಸಿದೆ.
ತಮ್ಮ “ಲೆಟ್ ಮಿ ಸೇ ಇಟ್ ನೌ” ಎಂಬ ಪುಸ್ತಕದಲ್ಲಿ ಉಗ್ರ ಅಜ್ಮಲ್ ಕಸಬ್, ಐಎಸ್ ಐ ಸೂಚನೆಯಂತೆ ಮಣಿಕಟ್ಟಿಗೆ ಕೆಂಪು ದಾರವನ್ನು (ಹಿಂದೂ ಧರ್ಮದ ಸಂಕೇತ ಎಂಬಂತೆ) ಕಟ್ಟಿಕೊಂಡಿದ್ದ. ಅಲ್ಲದೆ ನಕಲಿ ಗುರುತಿನ ಚೀಟಿಯಲ್ಲಿ ಸಮೀರ್ ದಿನೇಶ್ ಚೌಧರಿ, ಹೈದರಾಬಾದ್ ಕಾಲೇಜು ವಿದ್ಯಾರ್ಥಿ ಎಂದು ನಮೂದಿಸಿದ್ದ. ಅಲ್ಲದೆ ಬೆಂಗಳೂರಿನ ನಕಲಿ ವಿಳಾಸ ಅದರಲ್ಲಿ ಬರೆದಿತ್ತು ಎಂದು ರಾಕೇಶ್ ಮರಿಯಾ ವಿವರಿಸಿದ್ದಾರೆ
ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿಯದೆ ಇರುತ್ತಿದ್ದರೆ, ಆತ ಪಾಕಿಸ್ತಾನದ ಫರಿದ್ ಕೋರ್ಟ್ ನಿವಾಸಿ ಎಂಬ ಸತ್ಯ ಹೊರಬರುತ್ತಿರಲಿಲ್ಲ. ಕಸಬ್, ಚೌಧರಿಯಂತೆ ಸಾವನ್ನಪ್ಪುತ್ತಿದ್ದ ಹಾಗೂ ಮಾಧ್ಯಮಗಳು ದಾಳಿಗೆ ‘ಹಿಂದೂ ಭಯೋತ್ಪಾದಕರನ್ನು’ ದೂಷಿಸುತ್ತಿದ್ದವು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪಾಕ್ ನ ಯೋಜನೆಯನ್ನು ವಿಫಲಗೊಳಿಸುವಲ್ಲಿ ಹುತಾತ್ಮ ಮುಂಬೈ ಕಾನ್‌ಸ್ಟೆಬಲ್ ತುಕಾರಂ ಓಬ್ಳೆ ಅವರ ಸಾಧನೆ ಅಪೂರ್ವವಾದದ್ದು. ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಓಬ್ಳೆ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ರಾಕೇಶ್ ಮರಿಯಾ ಪುಸ್ತಕದಲ್ಲಿ ಬರೆದಿದ್ದಾರೆ.