Bangalore : ಪ್ರೇಯಸಿಯನ್ನ ಕೊಲೆ ಮಾಡಿ ಪಾಗಲ್ ಪ್ರೇಮಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು : ಚಾಕುವಿನಿಂದ ಇರಿದು ಪ್ರೇಯಸಿಯನ್ನ ಕೊಲೆ ಮಾಡಿ ನಂತರ ಪ್ರಿಯತಮ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಂಡೆಪಾಳ್ಯದ ಬಳಿ ಇರುವ ಸೋಮಸುಂದ್ರು ಪಾಳ್ಯದಲ್ಲಿ ಈ ಕೃತ್ಯ ನಡೆದಿದೆ.
ಇಬ್ಬರ ನಡುವೆ ಮನಸ್ತಾಪ ಜಗಳಕ್ಕೆ ಕಾರಣವಾಗಿದೆ. ಬಳಿಕ ಜಗಳ ಪ್ರೇಯಸಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಆರೋಪಿಯನ್ನ ರಾಜು ಎಂದು ಗುರುತಿಸಲಾಗಿದ್ದು, ಈತ ಜೋಮೊಟೋದಲ್ಲಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನಂತೆ.
ಸದ್ಯ ರಾಜುವಿಗೆ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
