ಬಾಗಲಕೋಟೆ | ಯುವಕನ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ bagalakote saaksha tv
ಬಾಗಲಕೋಟೆ : ಕೊಡಲಿಯಿಂದ ಹೊಡೆದು ಯುವಕನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕನಾಳದಲ್ಲಿ ನಡೆದಿದೆ.
27 ವರ್ಷದ ವಿಠ್ಠಲ್ ಸೀಮಿ ಕೊಲೆಯಾದ ಯುವಕನಾಗಿದ್ದು, ಜಗದೀಶ್ ಭಂಡಾರಿ ಕೊಲೆ ಆರೋಪಿಯಾಗಿದ್ದಾರೆ.
ಚಿಕ್ಕನಾಳ ಗ್ರಾಮದ ಹತ್ತಿರ ಸಾಯಿ ಪಾರ್ಕ್ ಹೋಟೆಲ್ ಬಳಿ ಸ್ನೇಹಿತರ ಜೊತೆ ವಿಠ್ಠಲ ಊಟಕ್ಕೆ ಬಂದಿದ್ದರು.
ಈ ವೇಳೆ ಜಗದೀಶ್ ಭಂಡಾರಿ ಎನ್ನುವವರು ಈತನನ್ನು ನೋಡಿ ಆಕ್ರೋಶಕೊಂಡು ಕೊಡಲಿಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ.
ಈ ಹಳೆಯ ದ್ವೇಷಕ್ಕೆ ಜಗದೀಶ್ ಅವರು ಈ ಕೊಲೆ ಮಾಡಿದ್ದರೆಂಬ ಶಂಕೆ ವ್ಯಕ್ತವಾಗುತ್ತಿದೆ.









