Murugha Shree | ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್
ಚಿತ್ರದುರ್ಗ : ಪೋಕ್ಸೋ ಪ್ರಕರಣ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೃದಯ ಸಮಸ್ಯೆಯಿಂದಾಗಿ ಅವರನ್ನ ಆಸ್ಪತ್ರೆ ರವಾನಿಸಲಾಗಿದೆ.
ಮುರುಘಾ ಶ್ರೀಗಳು ಕರೋನರಿ ಆಂಜಿಯೋಗ್ರಾಮ್ ನಿಂದ ಬಳಲುತ್ತಿದ್ದಾರೆ.

ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದು ಶ್ರೀಗಳ ಪರ ವಕೀಲ ಮನವಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಸೂಚನೆ ಮೇರೆಗೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.