ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ 5 ವರ್ಷ ಜೈಲು ಶಿಕ್ಷೆ – ಮಯನ್ಮಾರ್ ಕೋರ್ಟ್
ಭ್ರಷ್ಟಾಚಾರ ಪ್ರಕರಣದಲ್ಲಿ ಪದಚ್ಯುತಗೊಂಡಿರುವ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಮ್ಯಾನ್ಮಾರ್ ನ್ಯಾಯಾಲಯವು ಬುಧವಾರ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ, ಅವರ ವಿರುದ್ಧ ದಾಖಲಾಗಿರುವ 11 ಭ್ರಷ್ಟಾಚಾರ ಪ್ರಕರಣಗಳಲ್ಲಿ ಮೊದಲನೆ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ರಾಯಿಟರ್ಸ್ ವರದಿ ಮಾಡಿದೆ.
ಯಾಂಗೂನ್ ನಗರದ ಮುಖ್ಯಮಂತ್ರಿಯಾಗಿದ್ದ ಫಿಯೋ ಮಿನ್ ಥೀನ್ ಅವರ ಆಪ್ತರಿಂದ 11.4 ಕೆಜಿ ಚಿನ್ನ ಮತ್ತು 6 ಲಕ್ಷ USD ಮೌಲ್ಯದ ನಗದು ಪಾವತಿಯನ್ನು ಸೂಕಿ ಸ್ವೀಕರಿಸಿದ್ದಾರೆ ಎಂಬ ಆರೋಪಗಳನ್ನ ಹೊರಿಸಲಾಗಿದೆ.
ಇದಕ್ಕೂ ಮೊದಲು, ಕಳೆದ ವರ್ಷ ಡಿಸೆಂಬರ್ ಮತ್ತು ಈ ವರ್ಷದ ಜನವರಿಯಲ್ಲಿ ಕೋವಿಡ್ ಉಪಕರಣಗಳ ಆಮದುಗೆ ಸಂಬಂಧಿಸಿದ ದೂರಸಂಪರ್ಕ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ, ಮತ್ತು ಮಿಲಿಟರಿಯ ವಿರುದ್ಧ ಪ್ರಚೋದನೆಗಾಗಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ.
76 ವರ್ಷದ ಆಂಗ್ ಸಾನ್ ಸೂಕಿ ವಿರುದ್ಧ ಕನಿಷ್ಠ 18 ಅಪರಾಧಗಳ ಆರೋಪ ಹೊರಿಸಲಾಗಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ 190 ವರ್ಷಗಳ ಗರಿಷ್ಠ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಆಂಗಗ ಸಾನ್ ಸೂಕಿ ಆರೋಪಗಳನ್ನ ನಿರಾಕರಿಸಿ ಆರೋಪಗಳನ್ನ “ಅಸಂಬದ್ಧ” ಎಂದು ಕರೆದರು. ಸೂಕಿ ಅವರನ್ನು ಜೈಲಿಗೆ ವರ್ಗಾಯಿಸಲಾಗುತ್ತದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆಕೆಯನ್ನು ಬಹಿರಂಗಪಡಿಸದ ಸ್ಥಳದಲ್ಲಿ ಇರಿಸಲಾಗಿದೆ,