ಫೇಸ್ ಬುಕ್ ಬಳಕೆ ಮ್ಯಾನ್ಮಾರ್ ನಲ್ಲಿ ನಿರ್ಬಂಧ : ನೂತನ ಸೇನಾ ಸರ್ಕಾರದ ಆದೇಶ..!
ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಇದೀಗ ಮಿಲಿಟರಿ ತನ್ನ ಅಧಿಪತ್ಯ ಸಾಧಿಸಿದೆ. ನೂತನ ಮಿಲಿಟರಿ ಸರ್ಕಾರ ತನ್ನ ದೇಶದ ಜನತೆಗೆ ಫೇಸ್ ಬುಕ್ ಪ್ರವೇಶವನ್ನು ನಿರ್ಬಂಧಿಸಿದೆ. ಇದೇ ವೇಳೆ ಮಿಲಿಟರಿಯು ಚುನಾಯಿತ ನಾಗರಿಕ ಸರ್ಕಾರ ಮತ್ತು ಅದರ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಪದಚ್ಯುತಗೊಳಿಸಿದ್ದಾಗಿ ಕರೆ ನೀಡಿದೆ. ಫೇಸ್ ಬುಕ್ನಲ್ಲಿ ಮ್ಯಾನ್ಮಾರ್ ನಲ್ಲಿ ನಡೆಯುತ್ತಿದ್ದ ಹೋರಾಟವು ಜನಪ್ರಿಯವಾಗಿದ್ದು, ಇದಕ್ಕೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ, ಮಿಲಿಟರಿ ಅಡಳಿತ ಈ ನಿರ್ಧಾರಕ್ಕೆ ಬಂದಿದೆ. ಬುಧವಾರ ರಾತ್ರಿ ಯಿಂದ ಫೇಸ್ ಬುಕ್ ತನ್ನ ಕೆಲಸ ನಿಲ್ಲಿಸಿದೆ ಅಂತ ಇಂಟರ್ನೆಟ್ ಬಳಕೆದಾರರು ತಿಳಿಸಿದ್ದಾರೆ. ಮ್ಯಾನ್ಮಾರ್ ನ ಟೆಲಿಕಾಂ ಸೇವಾದಾರರು ತಾತ್ಕಾಲಿಕವಾಗಿ ಫೇಸ್ ಬುಕ್ ಅನ್ನು ಬ್ಲಾಕ್ ಮಾಡುವಂತೆ ಆದೇಶ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel