ಮ್ಯಾನ್ಮಾರ್ ಸೇನಾ ದಂಗೆ : ಭಾರತ- ಅಮೆರಿಕ ಚರ್ಚೆ..!
ನವದೆಹಲಿ: ಮ್ಯಾನ್ಮಾರ್ ನಲ್ಲಿ ರಾಜಕೀಯ ಬಿಕ್ಕಟ್ಟು ತುರ್ತು ಪರಿಸ್ಥಿತಿ ಘೋಷಣೆ, ಸೇನಾ ಸರ್ಕಾರ ಇದೆಲ್ಲದರ ಬೆಳವಣಿಗೆಗಳ ಕುರಿತು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್ ಮಾತುಕತೆ ನಡೆಸಿದ್ದಾರೆ. ಮ್ಯಾನ್ಮಾರ್ನಲ್ಲಿ ತಲೆದೋರಿರುವ ಬಿಕ್ಕಟ್ಟು, ಅಮೆರಿಕ- ಭಾರತದ ನಡುವಿನ ಪಾಲುದಾರಿಕೆಯ ಬಲವನ್ನು ಗಟ್ಟಿಗಳಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಮಾಹಿತಿ ನೀಡಿದ್ದಾರೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ , ಬ್ಲಾಕ್ ಮೇಲ್ : ಇಬ್ಬರ ಬಂಧನ..!
ದೂರವಾಣಿ ಮೂಲಕ ಮಾತನಾಡಿರುವ ಇಬ್ಬರು ನಾಯಕರು ಮ್ಯಾನ್ಮಾರ್ನ ಸೇನಾ ದಂಗೆ, ಹದಗೆಟ್ಟ ಕಾನೂನು ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಪ್ರೈಸ್ ಹೇಳಿದ್ದಾರೆ. ಪ್ರಚಲಿತ ಪ್ರಾದೇಶಿಕ ವಿದ್ಯಮಾನ, ಕೋವಿಡ್ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವುದರ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ನೆಡ್ ಪ್ರೈಸ್ ತಿಳಿಸಿದ್ದಾರೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮ್ಯಾನ್ಮಾರ್ನಲ್ಲಿ ಕಳೆದ ವಾರ ಸೇನಾ ಆಡಳಿತ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಿ, ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ಆಡಳಿತಾರೂಢ ಸರ್ಕಾರದ ನಾಯಕಿ ಆಂಗ್ ಸಾನ್ ಸೂಕಿ ಸೇರಿದಂತೆ ಉನ್ನತ ರಾಜಕೀಯ ವ್ಯಕ್ತಿಗಳನ್ನು ಬಂಧಿಸಿದೆ.
ಕೇಂದ್ರ ಸರ್ಕಾರದ ಖಡಕ್ ಸೂಚನೆಗೆ ಬೆಚ್ಚಿಬಿದ್ದ ಟ್ವಿಟ್ಟರ್ – 700 ಕ್ಕೂ ಅಧಿಕ ಅಕೌಂಟ್ ಗಳು ಬ್ಲಾಕ್
‘ಪುರುಷೋತ್ತಮ’ ದಲ್ಲಿ ನಾಯಕನಾಗಿ ಮಿಂಚಲಿದ್ದಾರೆ ಜಿಮ್ ರವಿ..!
ಉತ್ತರಕಾಂಡ್ ನಲ್ಲಿ ಹಿಮಕುಸಿತ : ದುರಂತಕ್ಕೆ ವಿಕಿರಣ ಕಾರಣ..? ಸ್ಥಳೀಯರ ಶಂಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel