ಅಮೆರಿಕದಲ್ಲಿ ಮ್ಯಾನ್ಮಾರ್ ನ ಪ್ರಜೆಗಳಿಗೆ ತಾತ್ಕಾಲಿಕ ರಕ್ಷಣೆ : ಜೋ ಬೈಡೆನ್ ಸರ್ಕಾರದಿಂದ ಆದೇಶ..!
ಅಮೆರಿಕಾ: ಮ್ಯಾನ್ಮಾರ್ನಲ್ಲಿ ಮಿಲಿಟರಿ ದಂಗೆ ಹಿನ್ನೆಲೆ ಅಮೆರಿಕಾದಲ್ಲಿ ಈಗಾಗಲೇ ನೆಲೆಸಿರುವ ಮ್ಯಾನ್ಮಾರ್ನ ಪ್ರಜೆಗಳಿಗೆ ತಾತ್ಕಾಲಿಕವಾಗಿ ನೆಲೆಸಲು ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರವು ಅವಕಾಶ ಕಲ್ಪಿಸಿದೆ. ಆದ್ರೆ ಈಗಾಗಲೇ ಅಲ್ಲಿ ನೆಲೆಸಿರುವವರಿಗೆ ಮಾತ್ರ ಈ ಅವಕಾಶ ನೀಡಲಾಗಿದ್ದು, 18 ತಿಂಗಳವರೆಗೂ ಈ ಅವಕಾಶವು ಜಾರಿಯಲ್ಲಿರಲಿದೆ.
ದಾಖಲೆಗಳು ದಿಕ್ಕಾಪಾಲು.. `ಬಾಕ್ಸ್ ಆಫೀಸ್ ಸುಲ್ತಾನ’ ಅನ್ನೋದು ಇದಕ್ಕೆ..!
ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯಿಂದಾಗಿ ಬೇರೆ ದೇಶಗಳಲ್ಲಿ ನೆಲೆಸಿರುವ ಮ್ಯಾನ್ಮಾರ್ ನ ಪ್ರಜೆಗಳು ತಮ್ಮ ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಮ್ಯಾನ್ಮಾರ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಜನರು ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಿಲಿಟರಿ ಸೇನೆಯು ನರಭಕ್ಷರಂತೆ ಜನರಂತೆ ಕೊಲ್ಲಲು ಮುಂದಾಗಿದೆ. ಈಗಾಗಲೇ 40 ಕ್ಕೂ ಹೆಚ್ಚು ಮಂದಿಯನ್ನ ಅಲ್ಲಿ ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ.
BIGG BOSS 8 : ಒಳ್ಳೆ ತನಕ್ಕೆ ಬೆಲೆ ಇಲ್ಲ..! ಜೈಲು ಸೇರಿದ ಬ್ರೋ ಗೌಡ ನಿಧಿ ಬಗ್ಗೆ ಹೇಳಿದ್ದೇನು..?
ಇತ್ತೀಚೆಗೆ ಸೇನಾ ಸರ್ಕಾರದ ಕ್ರೂರತೆಯಿಂದಾಗಿ ಅಲ್ಲಿನ ಪೊಲೀಸರು ಬಾರತಕ್ಕೆ ಓಡಿಬಂದಿದ್ದರು. ಒಟ್ಟಾರೆ ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮರಿಚಿಕೆಯಾಗ್ತಿದೆ. ಫೆಬ್ರುವರಿ 1ರಂದು ಅಲ್ಲಿನ ಪ್ರಮುಖ ರಾಜಕೀಯ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ಸೇನಾ ದಂಗೆ ಎದ್ದಿತ್ತು. ಮಿಲಿಟರಿ ಆಡಳಿತ ಅಧಿಕಾರಕ್ಕೇರಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಇಂಟರ್ ನೆಟ್ ಸೇವೆ ಸ್ಥಗಿತ ಸೇರಿ ಇನ್ನೂ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಒಂದೆಡೆ ಇಡೀ ವಿಶ್ವದಿಂದ ಸೇನಾ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದ್ರೆ, ಮತ್ತೊಂದೆಡೆ ಮ್ಯಾನ್ಮಾರ್ ಜನರ ಅಸಹಾಯಕತೆ ವಿರುದ್ಧ ಮರುಕ ವ್ಯಕ್ತವಾಗ್ತಿದೆ.