‘ಫೀಲ್ ದ ಪವರ್’ ನಲ್ಲಿ ಅಪ್ಪು ಪವರ್ ಸೂಪರ್..! ಮಸ್ತಾಗಿದೆ ಯುವರತ್ನ ಲಿರಿಕಲ್ ಸಾಂಗ್

1 min read

‘ಫೀಲ್ ದ ಪವರ್’ ನಲ್ಲಿ ಅಪ್ಪು ಪವರ್ ಸೂಪರ್..! ಮಸ್ತಾಗಿದೆ ಯುವರತ್ನ ಲಿರಿಕಲ್ ಸಾಂಗ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷೆಯ ಸಿನಿಮಾವಾದ ಯುವರತ್ನ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.  ಹೌದು ಸಿನಿಮಾದ 5 ಹಾಡು ಇಂದು ಬೆಳಿಗ್ಗೆ 10 ಗಂಟೆಗೆ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಹೊಂಬಾಳೆ ಯೂಟ್ಯೂಬ್‌ನಲ್ಲಿ ”ಫೀಲ್ ದಿ ಪವರ್” ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಲಕ್ಷಾಂತರ ವೀವ್ಸ್ ಹಾಗೂ ಭರ್ಜರಿ ಕಮೆಂಟ್ಸ್ ಗಳನ್ನ ಪಡೆದುಕೊಂಡಿದ್ದಾರೆ.  ಅಪ್ಪು ಪವರ್ ಫುಲ್, ಲುಕ್ , ರಿಚ್ ಮ್ಯೂಸಿಕ್ ಹಾಗೂ ಬಿಜಿಮ್ ಗೆ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ. ಅಲ್ದೇ ಸಿನಿಪ್ರಿಯರು ಅಪ್ಪು ಡ್ಯಾನ್ಸ್ ಗಾಗಿ ಕಾಯುತ್ತಿರೋದಾಗಿ ತಿಳಿಸಿದ್ದಾರೆ.

ಶಿವರಾತ್ರಿಯಂದು ಕಿಚ್ಚ ಸುದೀಪ್ ರನ್ನು ನೆನಪು ಮಾಡಿಕೊಂಡಿದ್ದೇಕೆ ರಾಗಿಣಿ..!

ಆದ್ರೆ ಇನ್ನೂ ಕೆಲ ಫ್ಯಾನ್ಸ್ ಈ ಹಾಡನ್ನ ಸಂಪೂರ್ಣವಾಗಿ ಇಷ್ಟಪಟ್ಟಿಲ್ಲ. ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಹಾಡುಗಳಿಂದ ನಿರಾಸೆ ಅನುಭವಿಸಿದ್ದ ನೆಟ್ಟಿಗರು ತಮಸ್ ಮ್ಯೂಸಿಕ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

 

ಕಾಂಗ್ರೆಸ್ ಸೇರಲಿದ್ದಾರೆ ಗೀತಾ ಶಿವರಾಜ್ ಕುಮಾರ್

ಅಂದ್ಹಾಗೆ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ  ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.  ಸಿನಿಮಾದಲ್ಲಿ ಅಪ್ಪುಗೆ ಸಂತೋಶ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ವಿಜಯ್ ಕಿರಂದೂರ್ ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಪೈರೆಸಿ ವಿರುದ್ಧ ಧ್ವನಿ ಎತ್ತಿದ ರಿಷಬ್ ಶೆಟ್ಟಿಗೆ ಸಾಥ್ ಕೊಟ್ಟ ಪವರ್ ಸ್ಟಾರ್..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd