ಪೈರೆಸಿ ವಿರುದ್ಧ ಧ್ವನಿ ಎತ್ತಿದ ರಿಷಬ್ ಶೆಟ್ಟಿಗೆ ಸಾಥ್ ಕೊಟ್ಟ ಪವರ್ ಸ್ಟಾರ್..!  

1 min read
Puneeth_Rajkumar

ಪೈರೆಸಿ ವಿರುದ್ಧ ಧ್ವನಿ ಎತ್ತಿದ ರಿಷಬ್ ಶೆಟ್ಟಿಗೆ ಸಾಥ್ ಕೊಟ್ಟ ಪವರ್ ಸ್ಟಾರ್..!

ಕೊರೊನಾ ಹಾವಳಿ, ಶೂಟಿಂಗ್ ವೇಳೆ ಅಪಘಾತ ಹೀಗೆ ಎಲ್ಲಾ ಕಷ್ಟಗಳನ್ನ ಎದುರಿಸಿ ಕೊನೆಗೂ ಥಿಯೇಟರ್ ಗಳಲ್ಲಿ ರಿಲೀಸ್ ಆದ ‘ಹೀರೋ’ಗೆ ತಕ್ಕ ನ್ಯಾಯ ಸಿಕ್ಕಿಲ್ಲ. ಹೌದು ರಿಷಬ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರುವ ‘ಹೀರೋ’ ಸಿನಿಮಾ ದ್ಯ ಪೈರೆಸಿ ಸುಳಿಯಲ್ಲಿ ಸಿಲುಕಿ ಒದ್ದಾಡ್ತಿದೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರಿಲೀಸ್ ಮಾಡಿರುವ ರಿಷಬ್ ಶೆಟ್ಟಿ ತೀವ್ರ ಬೇಸರವನ್ನ ವ್ಯಕ್ತಪಡಿಸಿದ್ದರು. ಜೊತೆಗೆ ಆಕ್ರೋಶವನ್ನೂ ಸಹ ಹೊರಹಾಕಿದ್ದರು.

ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಪೈರೆಸಿ ವಿರುದ್ಧ ಧ್ವನಿಯತ್ತಿದ್ದಾರೆ. ಯುವರತ್ನ ಸಿನಿಮಾದ ಪ್ರಚಾರ ವೇಳೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು , ತಂತ್ರಜ್ಞಾನದ ವಿರುದ್ಧ ಹೋರಾಟ ಸುಲಭವಲ್ಲ. ಪೈರಸಿ ನಿಲ್ಲುವಂತಾಗಲು ಮೊದಲು ನಾವು ಬದಲಾಗಬೇಕು. ಅಭಿಮಾನಿಗಳಲ್ಲಿ, ಸಿನಿಮಾ ಪ್ರೇಕ್ಷಕರಲ್ಲಿ ಕೇಳಿಕೊಳ್ಳುವುದೆಂದರೆ ಪೈರಸಿ ಎಲ್ಲಿಯಾದರೂ ಕಂಡುಬಂದರೆ ನೀವೆ ಅದನ್ನು ತಡೆಯಿರಿ. ಪೈರಸಿ ಕಾಪಿಗಳನ್ನು ನೋಡಬೇಡಿ. ಸೈಬರ್ ಕ್ರೈಂ ವಿಭಾಗ ಎಷ್ಟೇ ಬಲಗೊಂಡರು ಪೈರಸಿ ತಡೆಯುವುದು ಕಷ್ಟ. ತಂತ್ರಜ್ಞಾನ ಬಹಳ ಬದಲಾಗಿದೆ. ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿ ಇಂಟರ್‌ ನೆಟ್‌ನಲ್ಲಿ ಹರಿಬಿಡುತ್ತಿದ್ದಾರೆ. ಮೊದಲು ನಾವು ಬದಲಾಗಬೇಕು, ಆಗಷ್ಟೆ ಪೈರಸಿಯನ್ನು ಮಣಿಸಲು ಸಾಧ್ಯ ಎಂದಿದ್ದಾರೆ.

ರಾಧೆಶ್ಯಾಮ್ ಸಿನಿಮಾದ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ..!

ಅಂದ್ಹಾಗೆ ಇತ್ತೀಚೆಗೆ ‘ಹೀರೋ’ ಸಿನಿಮಾದ ಪೈರೆಸಿ ವಿರುದ್ಧ ವಿಡಿಯೋ ಮಾಡಿ  ಆಕ್ರೋಶ ಹೊರಹಾಕಿದ್ದ ರಕ್ಷಿತ್ , ಕೊರೊನಾ ಹಾವಳಿ, ಲಾಕ್ ಡೌನ್ ನಂತಹ ಸಮಯದಲ್ಲೂ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕಷ್ಟ ಪಟ್ಟು ಸಿನಿಮಾ ಮಾಡಿದ್ವಿ. ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ, ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೋವು ಹಂಚಿಕೊಂಡಿದ್ದರು.

BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!

‘ಹರಿ ಹರ ವೀರ ಮಲ್ಲು’ ಆದ ಪವನ್ ಕಲ್ಯಾಣ್..!

ಮೊದಲ ದಿನವೇ ದಾಖಲೆ ಕಲೆಕ್ಷನ್ ಗಳಿಸಿದ ‘ಬಾಕ್ಸ್ ಆಫೀಸ್ ಸುಲ್ತಾನ’ ನ ‘ರಾಬರ್ಟ್’..!

ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd