ರಾಧೆಶ್ಯಾಮ್ ಸಿನಿಮಾದ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ..!

1 min read

ರಾಧೆಶ್ಯಾಮ್ ಸಿನಿಮಾದ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ..!

ಪ್ರಭಾಸ್ ನಟನೆಯ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆಶ್ಯಾಮ್’ ಶಿವರಾತ್ರಿ ಹಬ್ಬಕ್ಕೆ ಫ್ಯಾನ್ಸ್ ಗಗೆ ಭರ್ಜರಿ ಗಿಫ್ಟ್ ನೀಡಿದೆ. ಹೌದು ಸಿನಿಮಾದ ಮತ್ತೊಂದು ಪೊಸ್ಟರ್ ರಿಲೀಸ್ ಮಾಡಿದೆ. ಅಂದ್ಹಾಗೆ ಇತ್ತೀಚೆಗೆ ಪ್ರೇಮಿಗಳ ದಿನಾಚರಣೆಯಂದು ಸಿನಿಮಾದ ಟೀಸರ್ ರಿಲೀಸ್ ಮಾಡಿ ಫ್ಯಾನ್ಸ್ ಮನಗೆದ್ದಿತ್ತು.

ಇದೀಗ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ. ಇದೊಂದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಹಳೆಯ ಪ್ಯಾರಿಸ್ ವಾತಾವರಣದಲ್ಲಿ ಸಿನಿಮಾ ಶೂಟಿಂಗ್ ನಡೆದಿದೆ. ಹೇಳಿ ಕೇಳಿ ಪ್ರೇಮಕಥೆಯಾಗಿರುವ ಸಿನಿಮಾದಲ್ಲಿ ನಾಯಕ ನಾಯಿಯರಿಬ್ಬರು ಪ್ರೇಮಲೋಕದಲ್ಲಿ ತೇಲಿಹೋಗಿರುವಂತಹ ಪೋಸ್ಟರ್ ಒಂದನ್ನ ರಿಲೀಸ್ ಮಾಡಿದೆ ಸಿನಿಮಾತಂಡ. ಈ ಪೋಸ್ಟರ್ ನೋಡಿ ಫ್ಯಾನ್ಸ್ ಗಳು ಕೂಡ ಕಳೆದುಹೋಗಿದ್ದಾರೆ.

ಮೊದಲ ದಿನವೇ ದಾಖಲೆ ಕಲೆಕ್ಷನ್ ಗಳಿಸಿದ ‘ಬಾಕ್ಸ್ ಆಫೀಸ್ ಸುಲ್ತಾನ’ ನ ‘ರಾಬರ್ಟ್’..!

ಅಂದ್ಹಾಗೆ @Radheshyam ಜುಲೈ 30 ರಂದು ಬಿಡುಗಡೆ ಆಗಲಿದೆ. ಕನ್ನಡ , ಹಿಂದಿ, ತೆಲುಗು, ತಮಿಳು ಹಾಗೂ ಮಳಯಾಳಂ ಭಾಷೆಗಳಲ್ಲಿ ರಾಧೆಶ್ಯಾಮ್ ರಿಲೀಸ್ ಆಗ್ತಿದೆ. ಸಖತ್ ಹೈ ಬಜೆಟ್ ಸಿನಿಮಾ ಇದಾಗಿದೆ. ಮೂಲಗಳ ಪ್ರಕಾರ ಸಿನಿಮಾ 250-300 ಕೋಟಿ ರೂಪಾಯಿಯ ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಎನ್ನಲಾಗಿದೆ. ಸಿನಿಮಾಗೆ ರಾಧಾ ಕೃಷ್ಣಕುಮಾರ್ ಆಕ್ಷನ್ ಕಟ್ ಹೇಳ್ತಿದ್ರೆ, ಭೂಷಣ್ ಕುಮಾರ್ ವಂಶಿ, ಪ್ರಮೋದ್, ಪ್ರಸೀದಾ ಬಂಡವಾಳ ಹೂಡಿದ್ದಾರೆ.

BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd