Mysore | ಗಂಡನ ಅಕ್ರಮ ಸಂಬಂಧ | ಗೃಹಿಣಿ ಆತ್ಮಹತ್ಯೆ
ಮೈಸೂರು : ಗಂಡನ ಅಕ್ರಮ ಸಂಬಂಧ ತಿಳಿದು ಗೃಹಿಣಿ ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಸರೋಜಾ ಆತ್ಮಹತ್ಯೆಗೆ ಶರಣಾಗಿ, ತನ್ನ ಇಬ್ಬರು ಮಕ್ಕಳಾದ ಗೀತಾ(6), ಕುಸುಮಾಗೂ (4) ನೇಣು ಬಿಗಿದಿದ್ದಾಳೆ.
ಸರೋಜಾ ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬುವರನ್ನು ಮದುವೆಯಾಗಿದ್ದರು.

ಈ ನಡುವೆ ಗಂಡನ ಅಕ್ರಮ ಸಂಬಂಧ ತಿಳಿದು ಪದೇ ಪದೇ ಮನೆಯಲ್ಲಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದರಿಂದ ಮನನೊಂದಿದ್ದ ಸರೋಜಾ ತವರಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಸದ್ಯ ಮೃತ ದೇಹಗಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇನ್ನು ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








