ಮೈಸೂರು : ನಾಡಹಬ್ಬ ದಸರಾಗೆ ಹೊಸ ಮಾರ್ಗ ಸೂಚಿ ಪ್ರಕಟ..!

1 min read

ಮೈಸೂರು : ನಾಡಹಬ್ಬ ದಸರಾಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಕೊರೊನಾ ಹಾವಳಿಯ ನಡುವೆಯೂ ಸರಳ, ಸಡಗರ , ಹಾಗೂ ಅತ್ಯಂತ ಸಂಭ್ರಮದಿಂದಲೇ ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಗಜಪಡೆ ತಾಲೀಮು ಕೂಡ ನಡೆಯುತ್ತಿದೆ. ಅಂಬಾರಿ ಹೊರಲು ಅಭಿಮನ್ಯು ಬ್ರಿಗೇಡ್ ಅಜ್ಜಾಗ್ತಿದೆ. ಸಾಂಸ್ಕ್ಋತಿಕ ನಗರಿಯಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಅಕ್ಟೋಬರ್ 7 ರಿಂದ ವೈಭವದ ದಸರಾ ಆರಂಭವಾಗಲಿದೆ. ಇನ್ನೂ ದಸರಾ ಆಚರಣೆಗೆ ರಾಜ್ಯ ಸರ್ಕಾರವು ಹೊಸ ಮಾರ್ಗ ಸೂಚಿಯನ್ನ ಪ್ರಕಟಿಸಿದೆ.

ನಾಡಹಬ್ಬ ದಸರಾಗೆ ಹೊಸ ಮಾರ್ಗ ಸೂಚಿ ಪ್ರಕಟ
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ 100 ಜನರಿಗೆ ಮಾತ್ರ ಅವಕಾಶ
ಅರಮನೆ ಆವರಣದಲ್ಲಿ ದಸರಾ ಆಚರಣೆ
ಜನರು ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯ
ವರ್ಚುವಲ್ ಮೂಲಕ ಜಂಬೂಸವಾರಿ ವೀಕ್ಷಣೆಗೆ ಅವಕಾಶ
ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಅವಕಾಶ
ಅಕ್ಟೋಬರ್ 7 ರಂದು ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮ
ಮೈಸೂರು ದಸರಾ ಸಾಂಸ್ಕೃತಿ ಕಾರ್ಯಮ್ರಕಗಳಿಗೆ 500 ಜನರಿಗೆ ಮಾತ್ರ ಅವಕಾಶ
ಜಂಬೂಸವಾರಿ, ಪಂಜಿನ ಕವಾಯಿತಿಗೆ 500 ಜನರಿಗೆ ಅವಕಾಶ

 

ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಸರಾ ಆಚರಣೆಗೆ ಗೈಡ್ ಲೈನ್
ಸರಳವಾಗಿ ದಸರಾ ಅಚರಣೆಗೆ ಸರ್ಕಾರ ಅನುಮತಿ
ಕಾರ್ಯಕ್ರಮದಲ್ಲಿ 4೦೦ ಕ್ಕೂ ಹೆಚ್ಚು ಜನರು ಸೇರುವಂತಿಲ್ಲ
ಸಾಂಸ್ಕೃತಿಕ ಹಾಗೂ ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd