Mysore | ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ : ಯದುವೀರ್ ಹೇಳಿದ್ದೇನು ?
ಮೈಸೂರು : ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣವನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಗತಿಸಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.
ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಚಾಲನೆ ನೀಡಿದರು.
ಬೆಳಗ್ಗೆ 7.50 ರಿಂದ 8.10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ನಡೆಯುವ ಚಾಮುಂಡಿ ತಾಯಿಯ ರಥೋತ್ಸವ ಇದಾಗಿದೆ.
ಈ ವೇಳೆ ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣವನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಗತಿಸಿದರು.
ಹತ್ತನೇ ಚಾಮರಾಜ ಒಡೆಯರ್ ಕಾಲದಿಂದಲೂ ರೈಲ್ವೆ ಅಭಿವೃದ್ಧಿಯಾಗಿದೆ.
ಒಡೆಯರ್ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಷಯ ಎಂದು ಹೇಳಿದ್ದಾರೆ.