Mysterious Image | ಎರಡು ಕಾಲುಗಳ ವಿಚಿತ್ರ ಜೀವಿ.. ಎಲ್ಲೆಂದರೇ..?
ವಿಶ್ವದಲ್ಲಿ ನಮಗೆ ಕಾಣಿಸದಂತಹ ಅದೆಷ್ಟೋ ಚಿತ್ರ, ವಿಚಿತ್ರ, ವಿಶೇಷಗಳು ಅಡಗಿವೆ.
ಆದ್ರೂ ಕೆಲವು ಸಂದರ್ಭದಲ್ಲಿ ಭೂಮಿ ಮೇಲೆ ಜರುಗುವ ಕೆಲವು ಘಟನೆಗಳು ನಮ್ಮನ್ನು ಮೂಖರನ್ನಾಗಿ ಮಾಡುತ್ತವೆ.
ಅದೇ ರೀತಿ ಇತ್ತೀಚೆಗೆ ಒಂದು ಘಟನೆ ಅಮೇರಿಕಾದಲ್ಲಿ ನಡೆದಿದೆ.
ಟೆಕ್ಸಾಸ್ ನ ಅಮರಿ ಪಟ್ಟಣದಲ್ಲಿ ವಿಚಿತ್ರ ಪ್ರಾಣಿಯ ಫೋಟೋ ಅಲ್ಲಿನ ಜನರಿಗೆ ಹುಳ ಬಿಟ್ಟಿದೆ.
ಮೇ 21 ರಂದು ಬೆಳಿಗ್ಗೆ 1:25 ಗಂಟೆಗೆ ಟೆಕ್ಸಾಸ್ನ ಮೃಗಾಲಯದಲ್ಲಿ ಜೀವಿವೊಂದು ಎರಡು ಕಾಲುಗಳ ಮೇಲೆ ನಿಂತಿದೆ.
ಇದು ಮೃಗಾಲಯದ ಭದ್ರತಾ ಕ್ಯಾಮೆರಾದಲ್ಲಿ ದಾಖಲಾಗಿದೆ.
ಆದರೆ, ಸಿಬ್ಬಂದಿ ಮೃಗಾಲಯದ ಹೊರಗಿನ ಫೆನ್ಸಿಂಗ್ ಬಳಿ ಜೀವಿ ಪತ್ತೆಯಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ನಂತರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸುತ್ತಮುತ್ತಲಿನ ಜನರಲ್ಲಿ ಭಯ ಹುಟ್ಟಿಸುತ್ತಿದೆ.
ಇನ್ನು ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅದು ನಿಜವಾದ ಪ್ರಾಣಿಯೇ..? ಯಾರಾದ್ರೂ ವಿಚಿತ್ರ ಗೆಟಪ್ ನಲ್ಲಿ ಬಂದಿದ್ದಾರಾ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.