ಮೈಶುಗರ್ ಕಾರ್ಖಾನೆ ಶೀಘ್ರ ಪ್ರಾರಂಭ: ಸಚಿವ ನಾರಾಯಣಗೌಡ ಭರವಸೆ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಿ ರೈತರಿಗೆ ನೆರವಾಗುತ್ತೇವೆ. ಕಾರ್ಖಾನೆ ಪ್ರಾರಂಭಿಸಲು ಸಹಕಾರ ಸಚಿವ ಸೋಮಶೇಖರ್ ಅವರ ಸಹಾಯವೂ ಬೇಕಿದ್ದು, ಅವರು ಅದಕ್ಕೆ ಒಪ್ಪಿಗೆ ಕೊಡುವುದಾಗಿ ತಿಳಿಸಿದ್ದಾರೆ. ಅವರೂ ಸಹ ಮಂಡ್ಯ ಜಿಲ್ಲೆಯವರೇ ಆಗಿದ್ದಾರೆ. ಹೀಗಾಗಿ ರೈತರಿಗೆ ನ್ಯಾಯ ಸಿಗಲಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಸಾಕಷ್ಟು ಕೊರೊನಾ ಪ್ರಕರಣಗಳಿದ್ದರೂ ನಿಯಂತ್ರಣಕ್ಕೆ ತರುವಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಶ್ರಮ ವಹಿಸಿದ್ದಾರೆ. ಅವರ ಶ್ರಮದಿಂದ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ತಡೆಯಲು ಅನುಕೂಲವಾಯಿತು ಎಂದು ನಾರಾಯಣಗೌಡ ತಿಳಿಸಿದರು.
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಹಕಾರ ಇಲಾಖೆ ವತಿಯಿಂದಲೇ ದಾಖಲೆಯ 53 ಕೋಟಿ ರೂ ಸಂಗ್ರಹಿಸಿ ಕೊಟ್ಟ ಖ್ಯಾತಿ ಸೋಮಶೇಖರ್ ಅವರಿಗೆ ಸೇರುತ್ತದೆ. ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ಸಹ ಅವರ ಇಲಾಖೆ ವತಿಯಿಂದಲೇ ತಗುಲುವ 12.7 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಕೊಡುತ್ತಿದ್ದಾರೆ ಎಂದರು.
ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ದೇಶದಲ್ಲಿ ಯೋಧರು ಹೇಗೆ ಗಡಿ ಕಾಯುತ್ತಿದ್ದಾರೋ ಹಾಗೆಯೇ ಇಲ್ಲಿ ನಮ್ಮನ್ನು ಆಶಾ ಕಾರ್ಯಕರ್ತೆಯರು ಕಾಯುತ್ತಿದ್ದಾರೆ. ಇಂಥ ಸೇವೆಯನ್ನು ಗುರುತಿಸಿ ಸರ್ಕಾರ ತಲಾ 3 ಸಾವಿರ ರೂಪಾಯಿ ಪೆÇ್ರೀತ್ಸಾಹಧನ ನೀಡುತ್ತಿರುವ ಕಾರ್ಯ ಶ್ಲಾಘನೀಯ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.
ಶಾಸಕರಾದ ಎಂ. ಶ್ರೀನಿವಾಸ್, ಜಿಲ್ಲಾಧಿಕಾರಿ ವೆಂಕಟೇಶ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಹನುಮಂತಯ್ಯ ಹಾಗೂ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‍ಗಳ ನಿರ್ದೇಶಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This