Mysuru : ಪಿರಿಯಾಪಟ್ಟಣದಲ್ಲಿ ಚರ್ಚ್ ಮೇಲೆ ದಾಳಿ; ಬಾಲ ಏಸುವಿನ ಪ್ರತಿಮೆಗೆ ಹಾನಿ…
ಮೈಸೂರು : ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್ ಒಳಗೆ ನುಗ್ಗಿ ಅಪರಿಚಿತ ದುಷ್ಕರ್ಮಿಗಳು ಚರ್ಚ್ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಬಾಲ ಏಸುವಿನ ಪ್ರತಿಮೆ ಸೇರಿದಂತೆ ಚರ್ಚ್‌ನಲ್ಲಿ ಇರಿಸಲಾಗಿದ್ದ ವಿವಿಧ ವಸ್ತುಗಳು ಹಾನಿಗೀಡಾಗಿರುವುದು ಕಂಡುಬಂದಿದೆ. ಮೈಕ್ ಮತ್ತು ಹುಂಡಿಯನ್ನ ಕಳವು ಮಾಡಲಾಗಿದೆ.
ಚರ್ಚ್ ನಲ್ಲಿ ಕೆಲಸಕ್ಕೆ ಇದ್ದ ಮಹಿಳೆ ರಜೆ ಹಾಕಿ ಊರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ನಿನ್ನೆ ಸಂಜೆ 6 ಗಂಟೆಗೆ ಚರ್ಚ್ ನ ಸಿಬ್ಬಂಧಿ ಆಗಮಿಸಿದ್ದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪಿರಾಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. “ನಾವು ಆರೋಪಿಗಳನ್ನು ಹಿಡಿಯಲು ತಂಡವನ್ನು ರಚಿಸಿದ್ದೇವೆ, ನಾವು ಹತ್ತಿರದ ಕ್ಯಾಮೆರಾಗಳೊಂದಿಗೆ ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಸಹ ಹುಡುಕುತ್ತಿದ್ದೇವೆ ಎಂದು ಮೈಸೂರು ಎಸ್ ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
Mysuru : Attack on church in Priyapatnam; baby Jesus statue damaged….