ದಿ. ಮುತ್ತಪ್ಪ ರೈ ಆಸ್ತಿ ವಿಲ್ ಸೀಕ್ರೆಟ್ ರಿವೀಲ್ ಆಗಿದ್ದು ನಿಜನಾ ?
ಹಿರಿಯ ಮಗನ ಅನುಪಸ್ಥಿತಿಯಲ್ಲಿ ಆಸ್ತಿ ವಿಲ್ ಸಿಕ್ರೇಟ್ ಬಹಿರಂಗ ಆಗುತ್ತಾ ?
ಮಕ್ಕಳು, ಕುಟುಂಬಸ್ಥರಿಲ್ಲದೆ ಕೇವಲ ವಕೀಲರು ವಿಲ್ ಬಹಿರಂಗಗೊಳಿಸಿದ್ದು ಸರಿನಾ ?
ಜಯ ಕರ್ನಾಟಕ ಸಂಸ್ಥಾಪಕ ದಿ. ಎನ್. ಮುತ್ತಪ್ಪ ರೈ ಅವರು ಬರೆದಿಟ್ಟಿರುವ ತಮ್ಮ ಆಸ್ತಿಯ 41 ಪುಟಗಳ ವಿಲ್ ಸಿಕ್ರೇಟ್ ಬಹಿರಂಗಗೊಂಡಿದೆ ಎಂಬ ಸುದ್ದಿಯನ್ನು ನಂಬೋಕೆ ಆಗ್ತಾ ಇಲ್ಲ. ಈಗಾಗಲೇ ರೈ ಅವರ ವಿಲ್ ಸೀಕ್ರೆಟ್ ರಿವಿಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಅವರ ವಕೀಲರು ವಿಲ್ ಬಗ್ಗೆ ಹೇಳಿಕೆ ಕೂಡ ಕೊಟ್ಟಿದ್ದಾರೆ. ಆದ್ರೆ ದಿ. ಮುತ್ತಪ್ಪ ರೈ ಆಪ್ತರು ಈ ಸುದ್ದಿ ಸುಳ್ಳು ಅಂತ ಹೇಳುತ್ತಿದ್ದಾರೆ.
ಮುತ್ತಪ್ಪ ರೈ ಅವರು ರಾಜ್ಯದಲ್ಲಿ ಸುಮಾರು 1500ರಿಂದ 2000 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ. ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ ತನ್ನ ಆಸ್ತಿಯನ್ನು ಬರೆದಿದ್ದಾರೆ. ಅಲ್ಲದೆ ತನ್ನ ಎರಡನೇ ಪತ್ನಿ ಅನುರಾಧಾ ಸೇರಿದಂತೆ ತಮ್ಮ ಸಂಬಂಧಿಕರಿಗೆ ನೀಡಿರುವ ಆಸ್ತಿಗಳ ವಿವರಗಳನ್ನು ಉಲ್ಲೇಖ ಮಾಡಿದ್ದಾರೆ. ಹಾಗೇ ಮನೆ ಕೆಲಸದವರಿಗೆ, ಕಾರು ಚಾಲಕರಿಗೆ ನಿವೇಶನಗಳ ಜೊತೆ ತಲಾ ಮೂರು ಲಕ್ಷ ರೂಪಾಯಿ ಆರ್ಥಿಕ ಸಹಾಯವನ್ನು ಮಾಡಲು ಹೇಳಿದ್ದಾರೆ ಅಂತೆಲ್ಲಾ ಸುದ್ದಿಗಳು ಬರುತ್ತಿವೆ.
ಒಂದು ಮೂಲದ ಪ್ರಕಾರ ದಿ. ಮುತ್ತಪ್ಪ ರೈ ಅವರು ಬರೆದಿಟ್ಟಿರುವ ವಿಲ್ ಇನ್ನೂ ರಿವೀಲ್ ಆಗಿಲ್ಲ. ಯಾಕಂದ್ರೆ ಮುತ್ತಪ್ಪ ರೈ ಅವರ ದೊಡ್ಡ ಮಗ ವಿದೇಶದಲ್ಲಿದ್ದಾರೆ. ಕಿರಿಯ ಮಗ ಮಾತ್ರ ಬೆಂಗಳೂರಿನಲ್ಲಿದ್ದಾರೆ. ಹಿರಿಯ ಮಗನ ಅನುಪಸ್ಥಿತಿಯಲ್ಲಿ ವಿಲ್ ಅನ್ನು ಹೇಗೆ ಬಹಿರಂಗಗೊಳಿಸಲಾಗುತ್ತದೆ. ಅಲ್ಲದೆ ವಿಲ್ ಓದುವಾಗ ಸಮ್ಮುಖದಲ್ಲಿ ಅವರ ಕುಟುಂಬಸ್ಥರು, ವಕೀಲರು ಹಾಗೂ ವಿಲ್‍ಗೆ ಸಾಕ್ಷಿ ಹಾಕಿದವರು ಕೂಡ ಇರಬೇಕಾಗುತ್ತದೆ.
ಹಾಗಿದ್ರೆ ಮುತ್ತಪ್ಪ ರೈ ಅವರ ವಕೀಲರು ವಿಲ್ ಸೀಕ್ರೇಟ್ ಅನ್ನು ಬಹಿರಂಗಗೊಳಿಸಿದ್ದಾರೆ ಎಂಬ ಪ್ರಶ್ನೆ ಕೂಡ ಹುಟ್ಟುತ್ತದೆ. ಯಾವುದೇ ವ್ಯಕ್ತಿ ಬರೆದಿಟ್ಟಿರುವ ವಿಲ್ ಅನ್ನು ಅವರ ಕುಟುಂಬಸ್ಥರ ಎದುರು ಬಹಿರಂಗಗೊಳಿಸಲಾಗುತ್ತದೆ. ಆದ್ರೆ ಇಲ್ಲಿ ವಕೀಲರೇ ಈ ವಿಷ್ಯವನ್ನು ಮಾಧ್ಯಮದ ಮುಂದೆ ಹೇಳಿರುವುದು ಹಲವೂ ಅನುಮಾನಗಳಿಗೂ ಎಡೆ ಮಾಡಿಕೊಡುತ್ತಿದೆ. ಯಾಕಂದ್ರೆ ಮುತ್ತಪ್ಪ ರಯ ಅವರ ಆಸ್ತಿ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮುತ್ತಪ್ಪ ರೈ ಅವರ ಹಿರಿಯ ಮಗ ರಾಕಿ ರೈ ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಆದ್ರೆ ಕೊರೋನಾ ವೈರಸ್‍ನಿಂದಾಗಿ ಈ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ರೈ ಅವರ ಆಸ್ತಿ ಎಷ್ಟಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಂತೂ ಇದ್ದೇ ಇದೆ.
ಅನೀರಿಕ್ಷಿತವಾಗಿ ಭೂಗತ ಜಗತ್ತಿನ ಕಾಲಿಟ್ಟ ಮುತ್ತಪ್ಪ ರೈ ಅವರು ಬೆಳೆದು ಬಂದ ರೀತಿ ಮಾತ್ರ ಅಚ್ಚರಿಯನ್ನುಂಟು ಮಾಡುತ್ತದೆ. ಬ್ಯಾಂಕ್ ಕ್ಲಾರ್ಕ್, ಹೊಟೇಲ್ ಉದ್ಯಮಿಯಾಗಬೇಕು ಎಂಬ ಆಸೆಯನ್ನಿಟ್ಟುಕೊಂಡು ಪುತ್ತೂರಿನಿಂದ ಬೆಂಗಳೂರಿಗೆ ಬಂದಿದ್ದ ಮುತ್ತಪ್ಪ ರೈ ಆನಂತರ ಹೆಸರು ಮಾಡಿದ್ದು ಬೆಂಗಳೂರು ಭೂಗತಲೋಕದಲ್ಲಿ. ಬೆಂಗಳೂರು, ಮುಂಬೈ ನಂಟಿನೊಂದಿಗೆ ದುಬೈ ಸೇರಿಕೊಂಡಿದ್ದ ಮುತ್ತಪ್ಪ ರೈಯವರು ಆನಂತರ ಕಾನೂನಿಗೆ ತಲೆಬಾಗಿ ಜೈಲು ಸೇರಿಕೊಂಡಿದ್ದರು. ನಂತರ ತನ್ನ ಎಲ್ಲಾ ಕೇಸ್, ಆರೋಪಗಳಿಂದ ಮುಕ್ತರಾಗಿ ಜಯ ಕರ್ನಾಟಕ ಸಂಘಟನೆಯನ್ನು ಆರಂಭಿಸಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು.








