Nabha natesh : ವಜ್ರಕಾಯ ಬೆಡಗಿಗೆ ಅಪಘಾತ; ಚೇತರಿಸಿಕೊಳ್ಳುತ್ತಿರುವೆ ಎಂದ ನಟಿ…
ವಜ್ರಕಾಯ ಫೇಮ್ ನ ನಭಾ ನಟೇಶ್ ಮೊದಲ ಸಿನಿಮಾದಲ್ಲೇ ಶಿವಣ್ಣ ಜೊತೆಗೆ ನಟಿಸಿ ತಮ್ಮ ಆಕ್ಟಿಂಗ್ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಆ ನಂತರ ಟಾಲಿವುಡ್ ಕಡೆ ಪ್ರಯಾಣ ಬೆಳಸಿ ಅಲ್ಲಿ ಬ್ಯುಸಿಯಾಗಿದ್ದಾರೆ. ನಭಾ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದಾರೆ. ಯಾವುದೇ ಸಿನಿಮಾದ ಅಪ್ ಡೇಟ್ ಗಳನ್ನ ಕೊಟ್ಟಿರಲಿಲ್ಲ. 2021ರ ನಂತರ ಯಾವುದೇ ಸಿನಿಮಾಗಳನ್ನ ನಭಾ ಒಪ್ಪಿರಲಿಲ್ಲ,.. ಇದೀಗ ಇದರ ಹಿಂದಿನ ಕಾರಣವನ್ನ ಸ್ವತಃ ಅವರೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ನಭಾ ನಟೇಶ್ 2022ರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರಂತೆ, ಎಡಗೈ ಮತ್ತು ಎಡಭುಜಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಸರ್ಜರಿಗೆ ಒಳಗಾಗಿದ್ದಾನೆ ನಭಾ ಈಗ ಸುದ್ದಿಯನ್ನ ರಿವಿಲ್ ಮಾಡಿದ್ದಾರೆ.
ಸಾಕಷ್ಟು ಸಮಯದಿಂದ ನಾನು ಯಾರಿಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ ನಾನು ನಿಮ್ಮನ್ನು ಹೇಗೆ ಮಿಸ್ ಮಾಡಿಕೊಂಡನೋ ಹಾಗೇ ನೀವು ಕೂಡ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಭಾವಿಸಿರುವೆ. ಕಳೆದ ವರ್ಷ ನನ್ನ ಜೀವನದ ಕಷ್ಟ ಸಮಯ ಎದುರಾಗಿತ್ತು. ಭೀಕರ ಅಪಘಾತಕ್ಕೆ ಒಳಗಾಗಿ ನಾನು ನನ್ನ ಎಡ ಭುಜದ ಮೂಳೆ ಫ್ರ್ಯಾಕ್ಚ ರ್ ಆಗಿದೆ. ಇದರಿಂದ ನಾನು ಮೂರ್ನಾಲ್ಕು ಬಾರಿ ಆಪರೇಷನ್ ಮಾಡಿಸಿಕೊಂಡಿರುವೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ನೋವು ಅನುಭವಿಸಬೇಕಾಗಿ ಬಂತು.
ಈಗ ನಾನು ಗಾಯದಿಂದ ಚೇತರಿಸಿಕೊಳ್ಳುತ್ತಿರುವೆ, ಒಂದು ಹೆಜ್ಜೆ ಹಿಂದೆ ಇಟ್ಟು ಸಿನಿಮಾ ಕೆಲಸದಿಂದ ಹೊರಬಂದಿರುವೆ, ನಾನು ಅತೀ ಹೆಚ್ಚು ಇಷ್ಟ ಪಡುವ ಕೆಲಸವಿದು ಎಂದು ನಭಾ ನಟೇಶ್ ಬರೆದುಕೊಂಡಿದ್ದಾರೆ.
ನಿಮ್ಮೆಲ್ಲರ ಪ್ರೀತಿಯಿಂದ ನಾನು ಕಮ್ ಬ್ಯಾಕ್ ಮಾಡಲು ಸಾಧ್ಯವಾಗಿದೆ. ನಾನು ಮಾಡಿರುವ ಕೆಲಸಕ್ಕೆ ನೀವು ಕೊಟ್ಟಿರುವ ಪ್ರೀತಿ ಅಪಾರ. ಈಗ ನಾನು ಚೇತರಿಸಿಕೊಂಡಿರುವೆ ಎಂದು ಖುಷಿಯಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಮೊದಲಿಗಿಂತ ಗಟ್ಟಿಯಾಗಿ ನಿಂತಿರುವೆ, ನಿಂತುಕೊಳ್ಳುವೆ. 2023 ನಾನು ಫುಲ್ ರೆಡಿಯಾಗಿರುವೆ ಎಂದು ಹೇಳಿದ್ದಾರೆ.
Nabha natesh had a bad accident and multiple surgery