ನಾಗಚೈತನ್ಯಗೆ ಎರಡನೆ ಮದುವೆ – ಹುಡುಗಿ ಹುಡುಕಲು ಮುಂದಾಯ್ತಾ ಕುಟುಂಬ ?
ಕಳೆದ ವರ್ಷ ತೆಲುಗು ಚಿತ್ರರಂಗದ ತಾರಾ ಜೋಡಿಯಾದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನ ಸಾಕಷ್ಟು ಸುದ್ದಿಯುಂಟು ಮಾಡಿತ್ತು. ಸಮಂತಾ ಜೊತೆಗಿನ ವಿಚ್ಛೇದನದ ನಂತರ ನಾಗ ಚೈತನ್ಯ ಒಂಟಿಯಾಗಿದ್ದಾರೆ ಎಂಬ ವರದಿಗಳೇ ಬಂದಿದ್ದವು. ಆದರೆ ಇತ್ತೀಚೆಗೆ ಹರಡುತ್ತಿರುವ ಗಾಸಿಪ್ ಪ್ರಕಾರ ನಾಗ ಚೈತನ್ಯ ಅವರಿಗೆ ಮದುವೆ ಮಾಡಲು ಕುಟುಂಬದವರು ಚಿಂತಿಸಿದ್ದಾರೆ. ಹುಡುಗಿಯನ್ನ ಹುಡುಕುತ್ತಿದ್ದಾರೆ ಎನ್ನವುವ ಗಾಸಿಪ್ ಸಿನಿ ಅಂಗಳದಲ್ಲಿ ಕೇಳಿ ಬರುತ್ತಿದೆ.
ವರದಿಗಳ ಪ್ರಕಾರ ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ. ಅಕ್ಕಿನೇನಿ ಕುಟುಂಬ ಒಳ್ಳೆಯ ಹುಡುಗಿಯನ್ನು ಹುಡುಕಲು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ. ನಾಗಚೈತನ್ಯ ತಂದೆ ನಟ ಅಕ್ಕಿನೇನಿ ನಾಗಾರ್ಜುನ ಸೊಸೆಯ ಹುಡುಕಾಟದಲ್ಲಿದ್ದಾರೆ ಎನ್ನುವ ಗಾಸಿಪ್ ಟಾಲಿವುಡ್ ನಿಂದ ಕೇಳಿ ಬರುತ್ತಿದೆ. ಆದರೆ ಅಕ್ಕಿನೇನಿ ಕುಟುಂಬದ ಯಾರೋಬ್ಬರೂ ಈ ಕುರಿತ ತುಟಿಬಿಚ್ಚಿಲ್ಲ.
ಕಳೆದ ವರ್ಷ ಅಕ್ಟೋಬರ್ 2 ರಂದು ಸಮಂತ ಮತ್ತು ನಾಗಚೈತನ್ಯ ಇಬ್ಬರೂ ತಮ್ಮ ವಿಚ್ಛೇದನದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. “ಸಾಕಷ್ಟು ಮಾತುಕತೆಗಳ ನಂತರ ನಾವು ಪತಿ-ಪತ್ನಿಯಾಗಿ ಬೇರೆಯಾಗಿ ನಮ್ಮ ದಾರಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೇವೆ. ಒಂದು ದಶಕಕ್ಕೂ ಹೆಚ್ಚು ಕಾಲ ಸ್ನೇಹವನ್ನು ಹೊಂದಿರುವುದು ನಮ್ಮ ಅದೃಷ್ಟ. ನಾವು ಯಾವಾಗಲೂ ವಿಶೇಷ ಬಾಂಧವ್ಯವನ್ನ ಹೊಂದಿರುತ್ತೇವೆ ಎಂದು ನಂಬಿಕೆಯಿದೆ.
ಸಮಂತಾ ಮತ್ತು ನಾಗ ಚೈತನ್ಯ ಮೊದಲು 6 ಅಕ್ಟೋಬರ್ 2017 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ಮತ್ತು ನಂತರ ಅಕ್ಟೋಬರ್ 7 ರಂದು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ವಿಚ್ಛೇದನಕ್ಕೂ ಮೊದಲು ಸಮಂತಾ ತನ್ನ ಹೆಸರಿನ ಮುಂದೆ ಅಕ್ಕಿನೇನಿ ಸರ್ ನೇಮನ್ನ ತೆಗೆದು ಹಾಕಿ ಅದನ್ನು ಸಮಂತಾ ರುತ್ ಪ್ರಭು ಎಂದು ಬದಲಾಯಿಸಿದರು. ಬರುವ ಅಕ್ಟೋಬರ್ 6ಕ್ಕೆ ಇಬ್ಬರೂ ಮದುವೆಯಾಗಿ ನಾಲ್ಕು ವರ್ಷಗಳು ತುಂಬಲಿವೆ.