ಮುನ್ಸಿಪಲ್ ಶಾಲೆಗೆ ಕಾಶ್ಮೀರಿ ಪಂಡಿತ್ ರ ಹೆಸರು
ನವದೆಹಲಿ: ದೆಹಲಿಯ ಮುನ್ಸಿಪಲ್ ಶಾಲೆಗೆ ಕಾಶ್ಮೀರಿ ಪಂಡಿತ್ ನಾಯಕ ಟಿಕಾ ಲಾಲ್ ತಾಪ್ಲು ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.
ಬಿಜೆಪಿ ಆಡಳಿತದ ಉತ್ತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (ಎನ್ಡಿಎಂಸಿ) ಶಾಲೆಗೆ ಟಿಕಾ ಲಾಲ್ ತಾಪ್ಲು ಅವರ ಹೆಸರು ಇಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಹೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಎನ್ಡಿಎಂಸಿ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಅಲೋಕ್ ಶರ್ಮಾ ಮಾತನಾಡಿ, ಸೆಕ್ಟರ್-7ರಲ್ಲಿರುವ ಎನ್ಡಿಎಂಸಿ ಪ್ರಾಥಮಿಕ ಶಾಲೆ 7-ಬಿ ಹೆಸರನ್ನು ಶಹೀದ್ ಟಿಕಾ ಲಾಲ್ ತಾಪ್ಲು ಎಂದು ಬದಲಾಯಿಸಲಾಗಿದೆ. ಅವರು ಅನ್ ಸಂಗ್ ಹೀರೋ ಆಗಿದ್ದು, ತಡವಾಗಿ ಈ ನಾಯಕನಿಗೆ ನಮನಗಳನ್ನು ಸಲ್ಲಿಸಲಾಗುತ್ತಿದೆ ಎಂದರು.
33 ವರ್ಷಗಳ ಹಿಂದೆ ಶ್ರೀನಗರದಲ್ಲಿ ಟಿಕಾಲಾಲ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.