ಬಾಗಲಕೋಟೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ಅವದಿಯ ಮೊದಲನೇ ವರ್ಷದ ಅವಧಿ ಪೂರ್ಣಗೊಳಿಸಿದೆ. ನರೇಂದ್ರ ಮೋದಿ ಸೇರಿದಂತೆ ಎಲ್ಲ ಕೇಂದ್ರದ ಸಂಪುಟದ ಸದಸ್ಯರಿಗೆ ಡಿಸಿಎಂ ಗೋವಿಂದ್ ಕಾರಜೋಳ ಅಭಿನಂದನೆಗಳು ತಿಳಿಸಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 303 ಸೀಟುಗಳು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಮೋದಿಯವರು ಅಧಿಕಾರಕ್ಕೆ ಬಂದಿದ್ದಾರೆ. ಅದು ಅವರ ಐದು ವರ್ಷದ ಅವಧಿಯ ಸಾಧನೆಯಿಂದಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಾರೆ.
ಸ್ವಜನಪಕ್ಷಪಾತ ವಲ್ಲದ ಪ್ರಾಮಾಣಿಕ ಉತ್ಯಮ ಆಡಳಿತ ನೀಡಿದ್ದರಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಬ್ ಕೆಸಬ್ ಕಾ ವಿಕಾಸ್ ಎನ್ನುವ ವಿಚಾರದೊಂದಿಗೆ ಎರಡನೇ ಅವಧಿಯ ಸರ್ಕಾರ ಸ್ಥಾಪನೆಗೊಂಡಿದೆ. ಒನ್ ಫಾಸ್ಟ ಟ್ಯಾಗ್ ಪಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಅದ್ಭುತವಾದ ನಿರ್ಣಯ ಮಾಡಲಾಗಿದೆ.
ಅಲ್ಲದೆ ಭ್ರಷ್ಟಾಚಾರ ನಿಲ್ಲಿಸುವುದಕ್ಕೆ ಪ್ರಧಾನಿ ಮೋದಿ ಒಳ್ಳೆಯ ಕೆಲಸಮಾಡಿದ್ದಾರೆ .ಮೂರು ಬಾರಿ ತಲಾಖ್ ಹೇಳಿದ್ರೆ ಹೆಣ್ಣು ಮಕ್ಕಳ ಭವಿಷ್ಯ ಬೀದಿಗೆ ಬೀಳುತ್ತಿತ್ತು. ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವ ಉತ್ತಮ ಕೆಲಸವನ್ನು ಮೋದಿಜೀ ಮಾಡಿದ್ದಾರೆ.ಜಮ್ಮು ಕಾಶ್ಮೀರ ಹಾಗೂ ಲಡಾಖ್ …ಎರಡು ಕೇಂದ್ರಾಡಳಿತ ಪ್ರದೇಶಗಳನ್ನ ಸ್ಥಾಪಿಸುವುದರ ಮೂಲಕ ಆ ಭಾಗದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಸಿಎಎ ಹಾಗೂ ಎನ್.ಆರ್.ಸಿ ಕಾಯ್ದೆಯನ್ನ ಪಕ್ಷಾತೀತವಾಗಿ ಎಲ್ಲರೂ ಮೆಚ್ಚಿದ್ದಾರೆ. ಕೆಲವು ಗೊಂದಲಗಳು ಸೃಷ್ಠಿಯಾದ್ರೂ ಎಲ್ಲರೂ ಒಪ್ಪಿಕೊಂಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಮಸೂದೆಗಳನ್ನ ಜಾರಿಗೆ ತಂದಿದ್ದಾರೆ. ಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ಕಿರುಕುಳ ಲೈಂಗಿಕ ದೌರ್ಜನ್ಯ ತಡೆಯಲು ಕಠಿಣ ಕಾನೂನು ಜಾರಿಗೊಳಿಸಿದ್ದಾರೆ. ಚಂದ್ರಯಾನ -2 ಯಶಸ್ವಿಯಾಗಿತ್ತು,ಸ್ವಲ್ಪದರಲ್ಲೇ ಹಿನ್ನಡೆಯಾಗಿದೆ ಆದ್ರೂ ಜಗತ್ತಿನ ಚಂದ್ರಯಾನ 2 ಅದ್ಭುತ ಸಾಧನೆ. ಬಸವಣ್ಣನವರ ಸಿದ್ದಾಂತಗಳನ್ನು ಚಾಚು ತಪ್ಪದೇ ನರೇಂದ್ರ ಮೋದಿ ಪಾಲಿಸುತ್ತಿದ್ದಾರೆ ಎನ್ನುವ ಮೂಲಕ ಡಿಸಿಎಂ ಗೋವಿಂದ್ ಕಾರಜೋಳ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.








