ಮೋದಿ ವರ್ಸಸ್ ದೀದಿ | ಮುಂದಿನ “ಲೋಕ” ಕದನದಲ್ಲಿ “ಮಮತಾ” ಪ್ರಧಾನಿ ಅಭ್ಯರ್ಥಿ

1 min read
mamatha banarjree

ಮೋದಿ ವರ್ಸಸ್ ದೀದಿ | ಮುಂದಿನ “ಲೋಕ” ಕದನದಲ್ಲಿ “ಮಮತಾ” ಪ್ರಧಾನಿ ಅಭ್ಯರ್ಥಿ

ಬೆಂಗಳೂರು : ಮುಂದಿನ “ಲೋಕ” ಕದನದಲ್ಲಿ “ಮಮತಾ” ಪ್ರಧಾನಿ ಅಭ್ಯರ್ಥಿ..! ಕೇಸರಿಗೆ ಟಕ್ಕರ್ ಕೊಡಲು ಒಂದಾಗುತ್ವಾ ತೃತೀಯ ರಂಗ ಸಜ್ಜು..! ಪ್ರಾದೇಶಿಕ ಪಕ್ಷಗಳೇ ಈಗ ಪ್ರಬಲ ಪ್ರತಿಪಕ್ಷ..!

ಹೌದು..! ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪ್ರದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ. ಈ ಫಲಿತಾಂಶ ಸ್ಪಷ್ಟವಾಗಿ ಒಂದು ವಿಚಾರವನ್ನ ಎತ್ತಿ ಹೇಳುತ್ತಿದೆ. ಅದೆನೆಂದರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಭಾರಿ ಆಕ್ರಮಣಕಾರಿಯಾಗಿ ಸ್ಪರ್ಧೆ ಮಾಡಲಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಟಿಎಂಸಿ, ಕೇರಳದಲ್ಲಿ ಎಡಪಕ್ಷ ಮೈತ್ರಿರಂಗ ಅಧಿಕಾರಕ್ಕೆ ಬಂದಿದೆ. ಇತ್ತ ಅಸ್ಸಾಂನಲ್ಲಿ ಅಸ್ಸಾಂಗಣ ಪರಿಷತ್ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್ ಎಲ್ಲೂ ಪ್ರಾಬಲ್ಯ ಸಾಧಿಸಿಲ್ಲ.

mamatha banarjree

ಕೇಸರಿಗೆ ಟಕ್ಕರ್ ನೀಡಲು ಒಂದಾಗಲಿವೆ ಪ್ರಾದೇಶಿಕ ಪಕ್ಷಗಳು..!

ರಾಷ್ಟ್ರೀಯ ಪಕ್ಷಗಳನ್ನು ದೂರ ಇಟ್ಟು ಪ್ರಾದೇಶಿಕ ಪಕ್ಷಗಳು ಮೈತ್ರಿಯಿಂದ ಸಾಧ್ಯವಾಗುವ ತೃತೀಯ ರಂಗದ ಕನಸು ಬಹಳ ವರ್ಷಗಳಿಂದ ಇದೆ. 1996-98ರಲ್ಲಿ ಅದು ನಿಜವಾಗಿತ್ತೂ ಕೂಡ. ಆಗ 13 ಪಕ್ಷಗಳು ಸೇರಿಕೊಂಡು ರೂಪಿಸಿದ್ದ ಸಂಯುಕ್ತ ರಂಗ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿತ್ತು. ಅದರಂತೆ ಇದೀಗ ಮತ್ತೆ ಪ್ರಾದೇಶಿಕ ಪಕ್ಷಗಳು ಒಂದಾಗಳು ಮುಂದಾಗಿವೆ. ಪಶ್ಚಿಮ ಬಂಗಾಳದ ಫಲಿತಾಂಶ ಹೊರಬರುತ್ತಿದ್ದಂತೆ ದೇಶದಲ್ಲಿದ್ದ ಪ್ರಾದೇಶಿಕ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿಗೆ ಖುದ್ದು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃತೀಯ ರಂಗ ರಚಿಸುವ ಇಚ್ಚೆಯನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ನಾವಿಲ್ಲಿ ಒಂದು ವಿಚಾರವನ್ನು ಗಮನಿಸಬೇಕು, ಅದೇನೆಂದರೆ ಪಶ್ಚಿಮ ಬಂಗಾಳದ ಚುನಾವಣೆಗೂ ಮುನ್ನಾ ಮಮತಾ ಬ್ಯಾನರ್ಜಿ “ಕಾಂಗ್ರೆಸ್ ಸೇರಿದಂತೆ 15 ಪಕ್ಷಗಳ ವರಿಷ್ಠರಿಗೆ ಪತ್ರ ಬರೆದು ಬಿಜೆಪಿಯನ್ನು ಒಟ್ಟಾಗಿ ಎದುರಿಸುವಂತೆ ಕರೆ ನೀಡಿದ್ದರು”. ಇದೀಗ ಅದರಂತೆ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೃತೀಯ ರಂಗಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ತೃತೀಯ ರಂಗದಲ್ಲಿದ್ದಾರೆ ಪ್ರಬಲ ನಾಯಕರು

ಹೌದು..! ತೃತೀಯ ರಂಗ ವಿಚಾರವಾಗಿ ಇಷ್ಟು ಗಟ್ಟಿಯಾಗಿ ಸುದ್ದಿ ಕೇಳಿಬರಲು ಪ್ರಮುಖ ಕಾರಣವೆಂದೆರೆ ಅದು ವರ್ಚಸ್ವಿ ನಾಯಕರು. ಪಶ್ಚಿಮ ಬಂಗಾಳದ ಮಟ್ಟಿಗೆ ಮಮತಾ ಬ್ಯಾನರ್ಜಿ ಸುಪ್ರೀಂ. ಅಲ್ಲಿ ಅವರನ್ನ ಅಲುಗಾಡಿಸೋದು ಅಷ್ಟು ಸುಲಭವಲ್ಲ ಅಂತಾ ಈಗಾಗಲೇ ಗೊತ್ತಾಗಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ಅವರಲ್ಲಿ ಡಿಎಂಕೆ ಬಲಿಷ್ಠ ನಾಯಕರನ್ನು ಕಂಡುಕೊಂಡಿದೆ. ಜೊತೆಗೆ ಜನರ ವಿಶ್ವಾಸವೂ ಅವರ ಮೇಲಿದೆ. ಸದ್ಯಕ್ಕೆ ಸ್ಟಾಲಿನ್ ತಮಿಳುನಾಡಿನ ನಯಾ ತಲೈವಾ ಅಂತಾನೇ ಹೇಳಬಹುದು. ಇನ್ನು ಕೇರಳದಲ್ಲಿ ಪಿಣರಾಯಿ ವಿಜಯನ್ ಈಗ ತುಂಬಾ ಜನಪ್ರಿಯ. ಅಲ್ಲಿ ಅವರ ನಾಯಕತ್ವವನ್ನು ಪ್ರಶ್ನೆ ಮಾಡಬಲ್ಲ ನಾಯಕರು ಮತ್ತೊಬ್ಬರಿಲ್ಲ. ಇತ್ತ ಮಹಾರಾಷ್ಟ್ರದಲ್ಲಿ ಎನ್ ಸಿಪಿ, ಶಿವಸೇನಾ ತಮ್ಮದೇ ಯಾದ ಪ್ರಬಲ್ಯ ಸಾಧಿಸಿದ್ದು, ಉದ್ಧವ್ ಠಾಕ್ರೆ ನಾಯಕತ್ವದಲ್ಲಿ ಇನ್ನಷ್ಟು ಬಲಿಷ್ಠಗೊಂಡಿವೆ. ಇದಿಷ್ಟೆ ಅಲ್ಲದೇ ಬಿಹಾರದ ಆರ್ ಜೆಡಿ, ಉತ್ತರ ಪ್ರದೇಶದ ಬಿಎಸ್ ಪಿ ಕೂಡ ಪ್ರಬಲ ನಾಯಕರನ್ನು ಹೊಂದಿವೆ.

mamatha banarjree

ಮುಂದಿನ ಚುನಾವಣೆ ಮೋದಿ ವರ್ಸಸ್ ದೀದಿ

ಸದ್ಯದ ಟ್ರೆಂಡ್ ನೋಡಿದ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೀದಿ ಕೇಸರಿ ಪಡೆಗೆ ಸವಾಲ್ ಹಾಕುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಂತೀಯ ಮಿತಿಗಳನ್ನು ಹಾಗೂ ತಾತ್ವಿಕ ಭಿನ್ನತೆಗಳನ್ನು ಮೀರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಒಂದಾಗಿದ್ದೇ ಆದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಸಂಶಯವೇ ಇಲ್ಲ ಅನ್ನೋದು ರಾಜಕೀಯ ಪಂಡಿತರ ಮಾತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd