Nasa – america mission rover successfull
Video – ಮಂಗಳನ ಅಂಗಳಕ್ಕಿಳಿದ ರೋವರ್ : ಯಶಸ್ಸಿನ ಹಿಂದಿದೆ ಭಾರತೀಯರದ್ದೇ ಮಹತ್ವದ ಪಾಲು..!
ಅಮೆರಿಕಾ : ನಾಸಾದ ರೋವರ್ ಮಿಷನ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಮಂಗಳ ಗ್ರಹದ ಮೇಲೆ ಏನ್ಶಿಯಂಟ್ ಜೀವಿಗಳ ವಾಸದ ಬಗ್ಗೆ ಹಾಗೂ ಅಲ್ಲಿ ಖಗೋಳ ವಿಜ್ಞಾನದ ಅನ್ವೇಷಣೆಗಾಗಿ ರೋವರನ್ನು ಕಳುಹಿಸಲಾಗಿತ್ತು. ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ನಿಜಕ್ಕೂ ಭಾರತಕ್ಕೆ ಹೆಮ್ಮಯ ವಿಚಾರವಾಗಿದೆ. ಈ ರೋವರ್ ನ ನಿಯಂತ್ರಣ ಹಾಗೂ ಪಥ ಮಾರ್ಗದರ್ಶನ ಇಂಜಿನಿಯರ್ ಆಗಿದ್ದವರು ಡಾ. ಸ್ವಾತಿ ಮೋಹನ್, ಭಾರತದ ಮೂಲದವರು.
ಹೌದು 7 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಸಾದ ಪರ್ಸೀವರೆನ್ಸ್ ರೋವರ್ ಮಂಗಳ ಗ್ರಹದ ಮೇಲ್ಮೈ ಮೇಲೆ ಯಶಸ್ವಿಯಾಗಿ ಗುರುವಾರ ಇಳಿದಿದೆ. ಮಂಗಳನ ಅಂಗಳದಲ್ಲಿ ಪ್ರಾಚೀನ ಸೂಕ್ಷ್ಮ ಜೀವಿಗಳು ಬದುಕಿದ್ದ ಕುರುಹುಗಳ ಶೋಧ ಕಾರ್ಯವನ್ನು ರೋವರ್ ಕೈಗೊಳ್ಳಲಿದೆ. ಎಸ್ಯುವಿ ಗಾತ್ರದ ಈ ರೋವರ್ ಒಂದು ಟನ್ ತೂಕ ಹೊಂದಿದ್ದು, ಏಳು ಅಡಿ ಉದ್ದದ ರೋಬೋಟಿಕ್ ಆರ್ಮ್, 19 ಕ್ಯಾಮೆರಾ, ಎರಡು ಮೈಕ್ರೋಫೋನ್ ಮತ್ತು ತನ್ನ ವೈಜ್ಞಾನಿಕ ಗುರಿಗಳಿಗೆ ನೆರವಾಗುವ ಅತ್ಯಾಧುನಿಕ ಸಾಧನಗಳಿಂದ ಸುಸಜ್ಜಿತವಾಗಿದೆ.
https://twitter.com/i/status/1362507074807205909
Nasa – america mission rover successfull