National Bird Day 2023 : ರಾಷ್ಟ್ರೀಯ ಪಕ್ಷಿ ದಿನದ ಇತಿಹಾಸ ಮತ್ತು ಮಹತ್ವ…
ಪ್ರತಿ ವರ್ಷದ ಜನವರಿ 5 ರಂದು ವಿಶ್ವದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಪಕ್ಷಿ ದಿನವನ್ನ ಆಚರಿಸಲಾಗುತ್ತದೆ. ಪಕ್ಷಿಗಳ ಸೌಂದರ್ಯ ಮತ್ತು ಪ್ರಾಮುಖ್ಯತೆಯನ್ನ ತಿಳಿಯಲು ಮತ್ತು ಸ್ವೀಕರಿಸಲು ಈ ದಿನವನ್ನ ನಿಗದಿಪಡಿಸಲಾಗಿದೆ.
ಪಕ್ಷಿಗಳು ಈ ಗ್ರಹದಲ್ಲಿ ಜೀವಿಸುತ್ತಿರುವ ಭವ್ಯ ಮತ್ತು ವೈವಿದ್ಯಮಯ ಜೀವಿಗಳಲ್ಲಿ ಒಂದಾಗಿವೆ. ಸುಮಧುರ ಧ್ವನಿ ಮತ್ತು ರೋಮಾಂಚಕ ಬಣ್ಣಗಳಿಂದ ಅಲಂಕರಿಸಲ್ಪಟ್ಟಿವೆ.
ನೈಸರ್ಗಿಕ ಪರಿಸರ ವ್ಯವಸ್ಥೆಗೆ ಇವುಗಳ ಕೊಡುಗೆ ಅಪಾರ . ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೀಜ ಪ್ರಸರಣಗಳಲ್ಲಿ ಗಮನಾರ್ಹ ಸೇವೆಯನ್ನ ನಿರ್ವಹಿಸುತ್ತೇ. ಆದರೇ ಇತ್ತೀಚೆಗೆ ಅರಣ್ಯ ನಾಶ, ಹವಾಮಾನ ಬದಲಾವಣೆ ಮತ್ತು. ಇತರ ಕಾರಣಗಳಿಂದ ಹಲವು ಪಕ್ಷಿ ಸಂಕುಲಗಳು ಅಳಿವಿನಂಚಿಗೆ ಸಿಲುಕಿವೆ.
ರಾಷ್ಟ್ರೀಯ ಪಕ್ಷಿ ದಿನಾಚರಣೆಯು ಸಾಕು ಪಕ್ಷಿಗಳ ದುರವಸ್ಥೆಯ ಬಗ್ಗೆ ಬೆಳಕು ಚೆಲ್ಲಲು ಸಾರ್ವಜನಿಕ ಜಾಗೃತಿಯನ್ನ ಹೆಚ್ಚಿಸುವ ಗುರಿಯನ್ನ ಹೊಂದಿದೆ. ಏವಿಯನ್ ವೆಲ್ಫೆರ್ ಒಕ್ಕೂಟದ ಒಂದು ಉಪಕ್ರಮವಾಗಿದೆ. ಇದು ಹಣಕಾಸಿಗಾಗಿ ಮತ್ತು ಮಾನವ ಮನೋರಂಜನೆಗಾಗಿ ಸೆರೆಹಿಡಿಯಲ್ಪಟ್ಟ ಪಕ್ಷಿಗಳ ಅವಸ್ಥೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.
2002 ರಲ್ಲಿ ಪ್ರಾರಂಭವಾದ ಈ ಆಚರಣೆಯನ್ನ ನಂತರ ರಾಷ್ಟ್ರೀಯ ಪಕ್ಷಿ ದಿನ ಎಂದು ಜನವರಿ 5 ರಿಂದ ವಾರ್ಷಿಕವಾಗಿ ಆಚರಿಸಲಾಗುತ್ತದೆ.
National Bird Day 2023: History and Significance of National Bird Day…