ಬಿಗ್ ಬಾಸ್ ಕನ್ನಡ ಸೀಸನ್ 11 ರಂಗೇರಿದಂತೆಯೇ, ಈ ಬಾರಿ ಉಗ್ರಂ ಮಂಜು ಸ್ಪರ್ಧಿಯ ಕ್ರೇಜ್ ಎಲ್ಲೆಡೆ ಹರಡುತ್ತಿದೆ. ವಿಶಿಷ್ಟವಾದ ಈ ಸಂಭ್ರಮದಲ್ಲಿ ಉಗ್ರಂ ಮಂಜು ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಬೆಂಬಲಿಸಲು ವಿಭಿನ್ನ ರೀತಿಯನ್ನು ಆಯ್ದುಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ, ಎತ್ತುಗಳ ಮೇಲೆ “ಮ್ಯಾಕ್ಸ್ ಮಂಜು,” “ಉಗ್ರಂ ಮಂಜು,” “ಗೆದ್ದು ಬಾ ಮಂಜು” ಮುಂತಾದ ಶಬ್ದಗಳನ್ನು ಬರೆದಿರುವುದು ಎಲ್ಲರ ಗಮನ ಸೆಳೆದಿದೆ.
ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವು ಎತ್ತುಗಳ ಕಸರತ್ತಿಗೆ ಪ್ರಸಿದ್ಧ. ಈ ಬಾರಿ, ಈ ಕಸರತ್ತಿನ ಎತ್ತುಗಳ ಮೇಲೆಯೇ ಮಂಜು ಅಭಿಮಾನಿಗಳು ತಮ್ಮ ವಿಶೇಷ ಅಭಿಮಾನ ವ್ಯಕ್ತಪಡಿಸಿದ್ದಾರೆ . ಉಗ್ರಂ ಮಂಜು ಬಿಗ್ ಬಾಸ್ ಮನೆಯೊಳಗೆ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದರೆ, ಅವರ ಅಭಿಮಾನಿಗಳು ಈ ಪ್ರಚಾರ ಅಭಿಯಾನದಿಂದ ಇನ್ನಷ್ಟು ಮನರಂಜನೆ ನೀಡುತ್ತಿದ್ದಾರೆ.
ಅಭಿಮಾನಿಗಳ ನವೀನತೆಯ ಪ್ರಚಾರ ಅಭಿಮಾನಿಗಳ ಪ್ರಚಾರದ ಈ ಹೊಸ ರೀತಿಯ ಬಗ್ಗೆ ಮಂಜು ಕುಟುಂಬ ಮತ್ತು ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದಾರೆ. “ಮಂಜು ನಮ್ಮ ಹೆಮ್ಮೆ, ಅವರ ಗೆಲುವಿಗೆ ನಮ್ಮೆಲ್ಲರ ಆಶೀರ್ವಾದವಿದೆ,” ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ. ಹಳ್ಳಿಗಳಿಗೆ ಬಂದೊದಗಿದ ಈ ಹೊಸ ಕ್ರೇಜ್ ಗ್ರಾಮೀಣ ಸಂಭ್ರಮಕ್ಕೆ ಹೊಸ ಆಯಾಮವನ್ನು ತಂದಂತಾಗಿದೆ.
ಬಿಗ್ ಬಾಸ್ ಸೀಸನ್ ಸೀಸನ್ 11 ರ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ತಮ್ಮದೇ ಆದ ಶಕ್ತಿಯನ್ನು ತೋರಿಸುತ್ತಿದ್ದರೂ, ಉಗ್ರಂ ಮಂಜು ಈಗಾಗಲೇ ಜನಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಅವರ ಆಟದ ತಂತ್ರ, ಕ್ರಿಯಾಶೀಲತೆ ಅವರ ಬೆಂಬಲಿಗರಿಗೆ ಇನ್ನಷ್ಟು ಕ್ರೇಜ್ ನೀಡುತ್ತಿದೆ.
ಈ ರೀತಿಯ ಪ್ರಚಾರ ಕೇವಲ ಬಿಗ್ ಬಾಸ್ ವೀಕ್ಷಕರಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲಿಯೂ ಕೌತುಕವನ್ನು ಮೂಡಿಸಿದೆ. ಎತ್ತಿನ ಮೇಲೆ ಪ್ರಚಾರ ಮಾಡುವ ಈ ಕಲ್ಪನೆಯು ತುಂಬಾ ಕ್ರಿಯೇಟಿವ್ ಆಗಿದ್ದು, ಹಬ್ಬದ ಸಂಭ್ರಮದ ಜೊತೆಗೆ ಸ್ಪರ್ಧೆಯ ಉತ್ಸಾಹವನ್ನೂ ಹೆಚ್ಚಿಸಿದೆ, ಎಂದು ಸ್ಥಳೀಯರು ಹೇಳಿದ್ದಾರೆ.
ಹಬ್ಬದ ಸಂಭ್ರಮದ ಜೊತೆ ಪ್ರಚಾರದ ಉತ್ಸಾಹ ಈ ಹೊಸ ಮಾದರಿಯ ಅಭಿಮಾನ ಪ್ರಚಾರವು ಬಿಗ್ ಬಾಸ್ ಸ್ಪರ್ಧೆಗೆ ಹೊಸ ಆಕರ್ಷಣೆಯನ್ನು ತಂದಿದ್ದು, ಉಗ್ರಂ ಮಂಜು ಅಭಿಮಾನಿಗಳಲ್ಲಿ ತುಂಬಾ ಪಾಸಿಟಿವ್ ಉತ್ಸಾಹವನ್ನು ತುಂಬಿದೆ. ಅವರ ಗೆಲುವಿಗಾಗಿ ಈ ವಿಭಿನ್ನ ಪ್ರಚಾರವು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗಮನ ಸೆಳೆಯುವಂತಾಗಿದೆ.