ನವದೆಹಲಿ : ಈಗಾಗಲೇ ಕೊರೊನಾಘಾತಕ್ಕೆ ಬೆಚ್ಚಿ ಬಿದ್ದಿರುವ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ದೆಹಲಿಯ ಹಲವು ಕಡೆ ಭೂಕಂಪನವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ರಾಷ್ಟ್ರೀಯ ಸಿಸ್ಮಾಲಜಿ ಕೇಂದ್ರ ನೀಡಿದ ಮಾಹಿತಿಯಂತೆ ಇಂದು ದೆಹಲಿಯಲ್ಲಾದ ಭೂಕಂಪನ ರಿಕ್ಟರ್ ಮಾಪಕದಲ್ಲಿ 3.5ರಷ್ಟು ಇತ್ತು ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಹವಾಮಾನ ಬದಲಾವಣೆಯಾಗಿ ಧೂಳಿನ ಚಂಡಮಾರುತವೇ ಸೃಷ್ಟಿಯಾಗಿತ್ತು. ಭಾರೀ ಗಾಳಿಯಿಂದಾಗಿ ಧೂಳು ಎದ್ದಿದ್ದರಿಂದ ಮಟ ಮಟ ಮಧ್ಯಾಹ್ನದಲ್ಲೂ ದೆಹಲಿಯಲ್ಲಿ ಕತ್ತಲೆ ಆವರಿಸಿದಂತಹ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಮಳೆ ಸಹ ಆಗಿದ್ದರಿಂದ ದೆಹಲಿ, ನೋಯಿಡಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಉಷ್ಣಾಂಶ ಕೂಡ ಕಡಿಮೆಯಾಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ದೆಹಲಿಯಲ್ಲಿ ಬಿಸಿಲಿನ ತಾಪ ಹೆಚ್ಚಿರುತ್ತದೆ.
ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ
ಬೆಂಗಳೂರು: ರಾಜಾಜಿನಗರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಜ್ಜನ ಎಂಬ ಮುಖವಾಡ ಧರಿಸಿದ ದುರ್ಜನ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರವಾಗಿ...








