ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್ (Congress) ನೊಂದಿಗೆ ಕೈ ಜೋಡಿಸಿ ಗೆಲುವು ಸಾಧಿಸಿದರೂ ಈಗ ಅದರ ಬೆಂಬಲ ಇಲ್ಲದೆ ನ್ಯಾಷನಲ್ ಕಾನ್ಫರೆನ್ಸ್ (NC) ಬಹುಮತ ಪಡೆದಿದೆ.
4 ಜನ ಪಕ್ಷೇತರ ಶಾಸಕರು ಈಗ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಈ ಪಕ್ಷಕ್ಕೆ ಈಗ ಕಾಂಗ್ರೆಸ್ ನ ಬೆಂಬಲದ ಅವಶ್ಯಕತೆಯೂ ಇಲ್ಲದಾಗಿದೆ. ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಗಳಿಗೆ ಚುನಾವಣೆ (Election) ನಡೆದಿದ್ದು ಸರ್ಕಾರ ರಚನೆಗೆ 46 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಸ್ಥಾನ ಗೆದ್ದರೆ 7 ಜನ ಪಕ್ಷೇತರರು ಗೆಲುವು ಸಾಧಿಸಿದ್ದರು. 7 ಜನರ ಪೈಕಿ 4 ಜನರು ಎನ್ ಸಿಗೆ ಬೆಂಬಲ ಸೂಚಿಸಿದ್ದಾರೆ.
ಪಕ್ಷೇತರರರು ಬೆಂಬ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಮಂತ್ರಿ ಸ್ಥಾನ ಕಡಿಮೆ ಸಿಗಬಹುದು ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ – 42, ಬಿಜೆಪಿ – 29, ಕಾಂಗ್ರೆಸ್ – 06, ಪಿಡಿಪಿ – 03, ಜೆಪಿಸಿ – 1, ಸಿಪಿಐ(ಎಂ)- 01
ಆಪ್ – 01, ಇತರರು – 07 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.