ಫ್ರೆಂಡ್ ಶಿಪ್ ಡೇ ಹುಟ್ಟಿದ್ದೇಗೆ : ಇತಿಹಾಸದಲ್ಲಿರುವ ಕಹಾನಿಗಳು ಏನು..?
ಸ್ನೇಹ ಎಂಬ ಪದವೇ ಹಾಗೆ. ರಕ್ತ ಸಂಬಂಧಗಳಿಗೂ ಮೀರಿದ್ದು ಈ ಬಂಧ. ಈ ಬಂಧಕ್ಕೆ ಜಾತಿ, ಧರ್ಮದ ಅಡ್ಡಿ ಇಲ್ಲ. ಸ್ನೇಹ ಎಲ್ಲೆ ಮೀರಿದ್ದು, ಕ್ಷಣದಲ್ಲಿ ಶುರುವಾಗುವ ಪರಿಚಯ, ಜೀವ ಇರುವವರೆಗೂ ಜೊತೆಯಾಗಿರುತ್ತದೆ. ಇಂದು ವಿಶ್ವ ಸ್ನೇಹಿತರ ದಿನಾಚರಣೆ. ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರಿಗೋಸ್ಕರ ಇರುವ ದಿನ ಇದು. ಇಂದು ಸ್ನೇಹ ಹಬ್ಬದ.
ಅಂದಹಾಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜುಲೈ 30ರಂದು ಗೆಳೆತನದ ದಿನವನ್ನು ಆಚರಿಸಲಾಗುತ್ತದೆ. ಆದ್ರೆ ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಗೆಳೆಯರ ಹಬ್ಬವನ್ನು ಆಚರಿಸಲಾಗುತ್ತದೆ.
ಹಾಗಾದ್ರೆ ಫ್ರೆಂಡ್ ಶಿಪ್ ಡೇ ಆಚರಣೆ ಹೇಗೆ ಆರಂಭವಾಯ್ತು ಅನ್ನೋದರ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದ್ರೆ ಹಲವರು ಹಲವು ಕಥೆಗಳನ್ನು ಹೇಳುತ್ತಾರೆ.
1958ರಲ್ಲಿ ಮೊದಲ ಬಾರಿಗೆ ಫ್ರೆಂಡ್ ಶಿಪ್ ಡೇ ಆಚರಣೆ ಆರಂಭವಾಯಿತಂತೆ. 1958ರ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೆರಿಕದಲ್ಲಿ ಯುವಕನನೋರ್ವನ ಕೊಲೆ ಆಗುತ್ತೆ. ಈ ವಿಷಯ ತಿಳಿದ ಆತನ ಗೆಳೆಯ ದುಃಖದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಈ ಈ ವಿಷಯ ತಿಳಿದ ಅಮೆರಿಕಾ ಸರ್ಕಾರ ಆಗಸ್ಟ್ ಮೊದಲ ಭಾನುವಾರದಂದು ಫ್ರೆಂಡ್ ಶಿಪ್ ಡೇ ಆಚರಣೆಗೆ ಕರೆ ನೀಡಿತು ಎಂದು ಹೇಳಲಾಗುತ್ತದೆ.
ಇಲ್ಲದೆ ಇತಿಹಾಸದ ಪುಟಗಳಲ್ಲಿ ಫ್ರೆಂಡ್ ಶಿಪ್ ಡೇ ಆಚರಣೆ ಬಗ್ಗೆ ಮತ್ತೊಂದು ಕಥೆ ಇದೆ. ಅದು ಏನಂದರೇ ಪೆರುಗ್ವೆಯ ವೈದ್ಯ ರಮನ್ ಆರ್ಟೊಮಿಯಾ ಜುಲೈ 20, 1958ರಂದು ಒಂದು ಡಿನ್ನರ್ ಪಾರ್ಟಿ ಆಯೋಜನೆ ಮಾಡುತ್ತಾರೆ. ಅಂದು ತಮ್ಮ ಎಲ್ಲ ಗೆಳೆಯರನ್ನ ಆಹ್ವಾನಿಸಿ ಗೆಳೆತನದ ದಿನ ಆಚರಿಸಲು ನಿರ್ಧರಿಸುತ್ತಾರೆ. ಅಂದು ಈ ಫ್ರೆಂಡ್ ಶಿಪ್ ಡೇ ಆಚರಣೆಗೆ ಬಂದಿದೆ ಎಂಬುದರ ಬಗ್ಗೆ ಹೇಳುತ್ತಾರೆ.
ಇನ್ನೊಂದು ಮೂಲದ ಫ್ರೆಂಡ್ ಶಿಪ್ ಡೇ ಮಾಕೆರ್ಂಟಿಂಗ್ ತಂತ್ರ ಎಂದು ಕೂಡ ಹೇಳಲಾಗುತ್ತಿದೆ.
ರಾಷ್ಟ್ರೀಯ ಸ್ನೇಹ ದಿನವು ಮೂಲತಃ 1930ರ ದಶಕದಲ್ಲಿ ಹಾಲ್ಮಾರ್ಕ್ ಕಾರ್ಡ್‍ಗಳಿಗೆ ಮಾರ್ಕೆಟಿಂಗ್ ತಂತ್ರವಾಗಿತ್ತಂತೆ. ಸಂಸ್ಥಾಪಕ ಜಾಯ್ಸ್ ಹಾಲ್ ಈ ದಿನ ಆಗಸ್ಟ್ 2 ರಂದು ನಡೆಯಲಿದೆ ಎಂದು ಗೊತ್ತುಪಡಿಸಿದರು. ಈ ದಿನದಂದು ನಿಮ್ಮ ಸ್ನೇಹಿತರಿಗೆ ಕಾರ್ಡ್ ಕಳುಹಿಸಿ ಶುಭ ಕೋರಿ ಎಂದರು. 1935 ರ ಯು.ಎಸ್. ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು ಎಂದು ಹೇಳಲಾಗುತ್ತಿದೆ.