ADVERTISEMENT
Thursday, May 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ನೆನಪು…! 

admin by admin
August 29, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

May 14, 2026
NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

May 14, 2026

ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ನೆನಪು…! 

ಆಗಸ್ಟ್ 29… ರಾಷ್ಟ್ರೀಯ ಕ್ರೀಡಾ ದಿನ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಾಂದ್ ಅವರ ಹುಟ್ಟಿದ್ದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. 1905ರಲ್ಲಿ ಅಲಹಬಾದ್ ನಲ್ಲಿ ಹುಟ್ಟಿದ್ದ ಧ್ಯಾನ್ ಚಾಂದ್ ಹೆಚ್ಚು ಓದಿದವರಲ್ಲ. ತನ್ನ 17ರ ಹರೆಯದಲ್ಲೇ ಭಾರತೀಯ ಸೇನೆ ಸೇರಿಕೊಂಡಿದ್ದರು. ಹಾಕಿ ಆಟದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ ಧ್ಯಾನ್ ಚಾಂದ್ ಅವರಿಗೆ ಸುಬೇದಾರ್ ಮೇಜರ್ ತಿವಾರಿ ಬೆಂಬಲ ನೀಡಿದ್ರು. ಅಲ್ಲದೆ ತಿವಾರಿ ಅವರ ಮಾರ್ಗದರ್ಶನದಲ್ಲಿ ಹಾಕಿ ಆಟವನ್ನು ಆಡಲು ಶುರು ಮಾಡಿದ್ದರು.

ಹಾಕಿ ಆಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಧ್ಯಾನ್ ಚಾಂದ್ ಅವರಿಗೆ ಸೇನೆಯಲ್ಲಿ ವಿವಿಧ ಹುದ್ದೆಗಳು ಒಲಿದು ಬಂದಿದ್ದವು. ಸೈನಿಕನಾಗಿ ಸೇನೆ ಸೇರಿಕೊಂಡ ಧ್ಯಾನ್ ಚಾಂದ್ ಅವರು ನಾಯಕ, ಸುಬೇದಾರ್ ನಂತರ ಲೆಫ್ಟಿನೆಂಟ್ ಹಾಗೂ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ 1936ರಲ್ಲಿ ಧ್ಯಾನ್ ಚಾಂದ್ ಅವರು ಭಾರತ ಹಾಕಿ ತಂಡದ ನಾಯಕನಾಗಿದ್ದರು.

ನಾವು ಧ್ಯಾನ್ ಚಾಂದ್ ಅವರ ಆಟವನ್ನು ನೋಡಿಲ್ಲ. ನೋಡಿದ್ದವರು ಅವರ ಆಟವನ್ನು ಬಣ್ಣಿಸುತ್ತಿರುವ ರೀತಿಯೇ ರೋಮಾಂಚನಗೊಳಿಸುತ್ತಿದ್ದವು. ಒಂದು ಬಾರಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನೊಳಗಡೆ ಚೆಂಡು ಸಿಲುಕಿಕೊಂಡ್ರೆ ಸಾಕು… ಎದುರಾಳಿ ತಂಡದ ಆಟಗಾರರು ಎಷ್ಟೇ ಸಾಹಸ ಪಟ್ಟರೂ ಚೆಂಡನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಕಿ ಸ್ಟಿಕ್ ನಲ್ಲೇ ಬುಗರಿಯಂತೆ ಚೆಂಡನ್ನು ತಿರುಗಿಸಿಕೊಂಡು ಹೋಗುತ್ತಿದ್ದ ಧ್ಯಾನ್ ಚಾಂದ್ ಗೋಲು ದಾಖಲಿಸಿದ್ದ ನಂತರವೇ ಚೆಂಡಿಗೆ ವಿರಾಮ ಸಿಗುತ್ತಿತ್ತು. ಅಷ್ಟರ ಮಟ್ಟಿಗೆ ಧ್ಯಾನ್ ಚಾಂದ್ ಹಾಕಿ ಆಟವನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನಲ್ಲಿ ಮ್ಯಾಗ್ನೇಟ್ ಇದೆಯೋ ಅಂತ ಪರೀಕ್ಷೆ ಕೂಡ ಮಾಡಲಾಗುತ್ತಿತ್ತು. ಆ ರೀತಿಯ ಚಮತ್ಕಾರಿಯ ಆಟವನ್ನು ಆಡುತ್ತಿದ್ದರು ಧ್ಯಾನ್ ಚಾಂದ್.

1922ರಿಂದ 1948ರವರೆಗೆ ಹಾಕಿ ಆಟದಲ್ಲಿ ಜಾದು ಮಾಡುತ್ತಿದ್ದ ಧ್ಯಾನ್ ಚಾಂದ್ ಅವರು 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ್ದರು. ಒಟ್ಟಾರೆ ತನ್ನ ಹಾಕಿ ಆಟದ ಬದುಕಿನಲ್ಲಿ ಧ್ಯಾನ್ ಚಾಂದ್ ಅವರು ಸುಮಾರು ಒಂದು ಸಾವಿರ ಗೋಲು ದಾಖಲಿಸಿದ್ದಾರೆ. ಹೀಗೆ ಧ್ಯಾನ್ ಚಾಂದ್ ಅವರ ಅದ್ಭುತ ಆಟ ಮತ್ತು ಬದ್ಧತೆ, ದೇಶ ಪ್ರೇಮಕ್ಕೆ 2012ರಿಂದ ಭಾರತ ಸರ್ಕಾರ ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದೆ. ಇದಕ್ಕೂ ಮೊದಲು ಧ್ಯಾನ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ರಾಷ್ಟ್ರೀಯ ಕ್ರೀಡಾ ದಿನದಂದು ಭಾರತದ ಶ್ರೇಷ್ಠ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಜೊತೆಗೆ ಧ್ಯಾನ್ ಚಾಂದ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಹಿಂದೆಯೇ ಮೇಜರ್ ಧ್ಯಾನ್ ಚಾಂದ್ ಅವರ ಕ್ರೀಡಾ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಕೇಳಿಬರುತ್ತಿದೆ. ಆದ್ರೆ ಭಾರತ ಸರ್ಕಾರ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮನಸ್ಸು ಮಾಡಲಿಲ್ಲ. ಅದ್ರಲ್ಲೂ  ಭಾರತ ರತ್ನ ಪ್ರಶಸ್ತಿ ಯ ನಿಯಮಗಳನ್ನು ಬದಿಗೊತ್ತಿ ಸಚಿನ್ ತೆಂಡುಲ್ಕರ್ ಗೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಇಂದಿಗೂ ನಡೆಯುತ್ತಿದೆ.

ಅದೇನೇ ಇರಲಿ, ಧ್ಯಾನ್ ಚಾಂದ್ ಅವರನ್ನು ವರ್ಷಕ್ಕೊಂದು ಬಾರಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಒಲಿಂಪಿಕ್ ಚಾಂಪಿಯನ್ ಆಗಿದ್ದ ಧ್ಯಾನ್ ಚಾಂದ್ ಅವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಕೂಡ ಮನ ಸೋತಿದ್ರು. ಧ್ಯಾನ್ ಚಾಂದ್ ಅವರ ಆಟವನ್ನು ನೋಡಿ ಬೆರಗುಗೊಂಡಿದ್ದ ಹಿಟ್ಲರ್ ಸೇನೆಯಲ್ಲಿ ಉನ್ನತ ಹುದ್ದೆ ನೀಡುವ ಆಶ್ವಾಸನೆ ನೀಡಿದ್ದರು. ಆದ್ರೆ ಧ್ಯಾನ್ ಚಾಂದ್ ಹಿಟ್ಲರ್ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದರು. ಹೀಗೆ ಧ್ಯಾನ್ ಚಾಂದ್ ಅವರ ಬದುಕಿನ ಅನೇಕ ಘಟನೆಗಳು ಯುವ ಕ್ರೀಡಾಪಟುಗಳಿಗೆ ದಾರಿ ದೀಪವಾಗಿದೆ.

Tags: #BHARATHA RATNA#hockey legend Major Dhyan Chand#INIDAN HOCKEY#Major Dhyan ChandHockeyNational Sports DaySachin TendulkarSports
ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

by Shwetha
May 14, 2026
0

ಬೆಂಗಳೂರು: ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ...

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

by Shwetha
May 14, 2026
0

ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ...

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

by Shwetha
May 14, 2026
0

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಇಂದು ವಿಧಾನಸೌಧದಲ್ಲಿ ತಮ್ಮ ರಾಜಕೀಯ ಆಕಾಂಕ್ಷೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಅತ್ಯಂತ ಪ್ರಭಾವಶಾಲಿ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳು...

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

by Shwetha
May 14, 2026
0

ಬೆಳಗಾವಿ ಮಹಾನಗರ ಪಾಲಿಕೆ ಸಭೆ ಮತ್ತೆ ಗಡಿ ವಿವಾದದ ಕಾವು ಪಡೆದುಕೊಂಡಿತು. ಕನ್ನಡ ಪರ ಸದಸ್ಯರು ಮತ್ತು MES ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ವಾತಾವರಣ...

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

by Shwetha
May 14, 2026
0

ಕರ್ನಾಟಕ ರಾಜಕೀಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸರ್ಕಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram