Natu Natu Song : ಭಾರತೀಯರ ಕನಸು ನನಸು ; ರಾಜಮೌಳಿ ಶ್ರಮಕ್ಕೆ ಒಲಿದ ಆಸ್ಕರ್…
ಭಾರತೀಯರ ಹಲವು ವರ್ಷಗಳ ಕನಸು ನನಸಾಗಿದೆ. S S ರಾಜಮೌಳಿ ನಿರ್ದೇಶನದ RRR ಚಿತ್ರ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಇಡೀ ಭಾರತೀಯ ಚಿತ್ರ ರಂಗ ಹೆಮ್ಮೆ ಪಡುವಂತಹ ಸಾಧನೆಯನ್ನ ಮಾಡಿದೆ. ಚರಣ್ ಮತ್ತು ಎನ್ಟಿಆರ್ ಅಭಿನಯದ RRR ಚಿತ್ರದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.
ರಾಜಮೌಳಿ ಅವರ ನಿರ್ದೇಶನದಲ್ಲಿ ಚಂದ್ರಬೋಸ್ ಅವರ ಸಾಹಿತ್ಯ ಮತ್ತು ಕೀರವಾಣಿ ಅವರ ಸಂಗೀತ ನಿರ್ದೇಶನದೊಂದಿಗೆ ನಾಟು ನಾಟು ಹಾಡು ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ ಅವರ ಧ್ವನಿಯಲ್ಲಿ ಜೀವ ತುಂಬಿಕೊಂಡರೇ ಮಾಸ್ಟರ್ ಪ್ರೇಮ್ ರಕ್ಷಿತ್ ಅವರ ನೃತ್ಯ ನಿರ್ದೇಶನಕ್ಕೆ ಚರಣ್ ಮತ್ತು ತಾರಕ್ ಅವರ ಹೆಜ್ಜೆ ತುಂಬಿದ ಹಾಡು ಇಡೀ ಆಸ್ಕರ್ ಪ್ರಶಸ್ತಿಯನ್ನ ಭಾರತಕ್ಕೆ ತರುವಲ್ಲಿ ಯಶ್ವಸಿಯಾಗಿದೆ.
ಪ್ರತಿಷ್ಠಿತ 95 ನೇ ಆಸ್ಕರ್ ಪ್ರಶಸ್ತಿ ಸಮಾರಂಭವು ಇಂದು 5:30 AM IST ರಿಂದ ನಡೆಯುತ್ತಿದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್ ಆಸ್ಕರ್ ಗೆ ವೇದಿಕೆಯಾಗಿದೆ. ಹಾಲಿವುಡ್ ನ ಖ್ಯಾತ ನಟ ಹಾಗೂ ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಸಮಾರಂಭವನ್ನು ಆಯೋಜಿಸಿದ್ದರು. ಆಸ್ಕರ್ ಸಮಾರಂಭಕ್ಕೆ ಹಾಲಿವುಡ್ ಮಾತ್ರವಲ್ಲದೆ ದೇಶ-ವಿದೇಶಗಳ ಚಿತ್ರರಂಗದ ಹಲವು ಶ್ರೇಷ್ಠ ನಟ, ನಟಿಯರು, ತಂತ್ರಜ್ಞರು ಆಗಮಿಸಿದ್ದರು.
ರಾಜಮೌಳಿ, ಎನ್‌ಟಿಆರ್, ಚರಣ್, ಸೆಂಥಿಲ್ ಕುಮಾರ್, ಕೀರವಾಣಿ, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್ ಕಾಲ ಭೈರವ, ಉಪಾಸನಾ, ರಾಜಮೌಳಿ ಅವರ ಪುತ್ರ ಕಾರ್ತಿಕೇಯ ಮತ್ತು ಇತರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಐದು ಹಾಡುಗಳು ನಾಮನಿರ್ದೇಶನಗೊಂಡರೆ RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪಡೆದರು. ನಾಟು ನಾಟು ಹಾಡು ಭಾರತದ ಮೊದಲ ಹಾಡು ಮತ್ತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ತೆಲುಗು ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಈ ಪ್ರಶಸ್ತಿಯು ಹೊಸ ಇತಿಹಾಸವನ್ನು ಸೃಷ್ಟಿಸಿತು.
ಆಸ್ಕರ್ ಗೆ ಕಾರಣರಾದ ಸಿನಿಮಾದಲ್ಲಿ ನಟಿಸಿದ ಎಲ್ಲರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಂಜಾನೆ ಇಡೀ ದೇಶವೇ ಶುಭ ಸುದ್ದಿಯೊಂದನ್ನು ಕೇಳಿದೆ ಎಂದು ಎಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಮತ್ತು ದೇಶ ವಿದೇಶಗಳ ಜನರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಿದ್ದಾರೆ.
Natu Natu Song : Indian dream come true ; Rajamouli’s hard work Oscar…