ಗದಗ: ಗದಗದಲ್ಲಿ ಬಾರೀ ಮಳೆಯಾಗುತ್ತಿರುವ ಪರಿಣಾಮ ನವಿಲು ತೀರ್ಥ ಡ್ಯಾಂ ಭರ್ತಿಯಾಗಿದೆ. ಈ ಹಿನ್ನೆಲೆ ಜಲಾಶಯದಿಂದ ಬರೋಬ್ಬರಿ 11ಸಾವಿರ ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಮತ್ತೆ ಬಿಡುಗಡೆ ಮಾಡಲಾಗಿದೆ. ಪರಿಣಾಮ ಲಖಮಾಪುರ, ಕೊಣ್ಣೂರ, ಬೂದಿಹಾಳ, ಹೊಳೆಮಣ್ಣೂರ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ನವಿಲು ತೀರ್ಥ ಡ್ಯಾಂನಿಂದ ಹೊರ ಹರಿವು ಇದೇ ರೀತಿ ಹೆಚ್ಚಾಗುತ್ತಲೇ ಹೋದರೆ ಜಿಲ್ಲೆಯ 15 ಕ್ಕೂ ಅಧಿಕ ಗ್ರಾಮಗಳಿಗೆ ನೆರೆ ಆತಂಕ ಶುರುವಾಗಲಿದೆ.ಇತ್ತೀಚೆಗಷ್ಟೇ ನೆರೆ ಆತಂಕದಿಂದ ಮುಕ್ತಗೊಂಡು ನಿರಾಳರಾಗಿದ್ದ ಜನರಲ್ಲಿ ಇದೀಗ ಮತ್ತೆ ನೆರೆ ಎದುರಾಗುವ ಭಯ ಶುರುವಾಗಿದೆ.