ಸೌತ್ ಸಿನಿಮಾರಂಗದ ಶ್ರೀಮಂತ ನಟಿ ಯಾರು..? ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ…?  

1 min read

ಸೌತ್ ಸಿನಿಮಾರಂಗದ ಶ್ರೀಮಂತ ನಟಿ ಯಾರು..? ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ…?

ದಕ್ಷಿಣಭಾರತದಲ್ಲಿ ಕೆಲವೇ ಕೆಲವು ನಟಿಯರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಬಹುಭಾಷೆಗಳಲ್ಲೂ ಸ್ಟಾರ್ ನಟರ ಜೊತೆ ಮಿಂಚಿದ್ದಾರೆ. ಸಮಂತಾ, ರಶ್ಮಿಕಾ , ಪೂಜಾ ಹೆಗ್ಡೆ, ರಕುಲ್ ಪ್ರೀತ್ ಹೀಗೆ ಬೆರಳೆಣಿಕೆಯಷ್ಟು ನಟಿಯರಿದ್ದಾರೆ.. ಆದ್ರೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಶ್ರೀಮಂತ ನಟಿ ಯಾರು ಗೊತ್ತಾ..?

ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರ…. ಹೌದು ನಯನತಾರ ಬಹುತೇಕ , ಕನ್ನಡ , ತಮಿಳು , ಮಳಯಾಳಂ , ತೆಲುಗು ಎಲ್ಲಾ ಭಾಷೆಗಳಲ್ಲು ಸೂಪರ್ ಸ್ಟಾರ್ ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಪ್ರಸ್ತುತ  ನಯನತಾರ ಅತ್ಯಂತ ಶ್ರೀಮಂತ ನಟಿ..

ಹಾಗಾದ್ರೆ  ನಯನತಾರ ಒಟ್ಟು ಆಸ್ತಿ ಎಷ್ಟು… ಈ ಬಗ್ಗೆ ಖಾಸಗಿ ಜೂಮ್ ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ನಲ್ಲಿ ವರದಿಯಾಗಿದೆ.  ತಮಿಳು ಇಂಡಸ್ಟ್ರಿಯ  ಸ್ಟಾರ್ ನಟಿ ನಯನತಾರ  ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.  ನಯನತಾರ ಒಟ್ಟು ಆಸ್ತಿ ಮೌಲ್ಯ ಸುಮಾರು 70 ಕೋಟಿ ಎಂದು ಅಂದಾಜಿಸಲಾಗಿದೆ.

ಕೇರಳ, ಚೆನ್ನೈನಲ್ಲಿ ದುಬಾರಿ ಮನೆಗಳನ್ನ ಹೊಂದಿದ್ದಾರೆ ನಯನತಾರ. ಜೊತೆಗೆ  2 ದುಬಾರಿ ಕಾರು ಇದೆ. ಅದರಲ್ಲಿ ಒಂದು ಆಡಿ ಕ್ಯೂ 7. ಈ ಕಾರಿನ ಬೆಲೆ 80 ಲಕ್ಷ. ಮತ್ತೊಂದು ಕಾರು ಬಿಎಂಡಬ್ಲ್ಯೂ ಎಕ್ಸ್‌ 5. ಈ ಕಾರಿನ ಬೆಲೆ 75.21 ಲಕ್ಷ  ರೂಪಾಯಿ ಎನ್ನಲಾಗಿದೆ.

ನಯನತಾರ ಕೇರಳದ ಸ್ವಗ್ರಾಮದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ನಯನತಾರ ಕುಟುಂಬ ಇದೆ. ನಯನತಾರ ಮೂಲತಃ ಕೇರಳದ ತಿರುವಳ್ಳಾದವರು. ಜೊತೆಗೆ ಚೆನ್ನೈನಲ್ಲಿ ದುಬಾರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅಲ್ಲದೇ ನಯನತಾರ ಖಾಸಗಿ ವಿಮಾನದಲ್ಲಿ ಸಂಚಾರ ಮಾಡುವುದು ತಿಳಿದಿರುವ ವಿಚಾರವೇ.. ನಯನತಾರ ಒಂದು ಸಿನಿಮಾಗೆ ಸುಮಾರು 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆಂದು ಹೇಳಲಾಗಿದೆ.

ಇತ್ತೀಚೆಗೆ ನಯನತಾರ  ತಮ್ಮ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಜೊತೆಗೆ ಖಾಸಗಿ ವಿಮಾನದಲ್ಲಿ ಸಂಚರಿಸುವ ಫೋಟೋಗಳು ಬಹಿರಂಗವಾಗಿದ್ದವು. ಪ್ರಸ್ತುತ ನಯನತಾರಾ ಅಣ್ಣಾತ್ತೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ ವಿಜಯ್ ಸೇತುಪತಿ ಜೊತೆಗೂ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದಾರೆ.  ಅಭಿನಯಿಸುತ್ತಿದ್ದಾರೆ.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd