ಪ್ರೇಮಿಗಳ ದಿನದಂದು ಸಂಭ್ರಮಿಸಿದ ನಯನತಾರ – ವಿಗ್ನೇಶ್ ಶಿವನ್
ನಯಂತರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೇಮ ಪಕ್ಷಿಗಳು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ಜೋಡಿ ನಿನ್ನೆ ಫೆಬ್ರವರಿ 14 ರಂದು ಸ್ಮರಣೀಯವಾಗಿ ಪ್ರೇಮಿಗಳ ದಿನಾಚರಣೆಯನ್ನ ಆಚರಿಸಿಕೊಂಡಿದೆ. ನಿರ್ದೇಶಕ ವಿಘ್ನೇಶ್ ಶಿವನ್ ಸುಂದರ ಸಮಯದ ಕ್ಷಣವನ್ನ ಇನ್ಸ್ಟಾಗ್ರಾಮ್ನಲ್ಲಿ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ “ಹೂವನ್ನು ತಂದು ಕೊಟ್ಟಾಗ ಹೇಗಿತ್ತೆಂದರೆ ಮೊದ ಬಾರಿಗೆ ಬೇಟಿ ಆದ ರೀತಿಯೇ ಇದೆ ಎಂದು “ ವಿಗ್ನೇಶ್ ಬರೆದುಕೊಂಡಿದ್ದಾರೆ.
ಮಾರ್ಚ್ 2021 ರಲ್ಲಿ, ವಿಘ್ನೇಶ್ ಶಿವನ್ ಮತ್ತು ನಯನತಾರಾ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎರಡು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ದಂಪತಿಗಳು ತಮ್ಮ ಮದುವೆಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಸಂದರ್ಶನವೊಂದರಲ್ಲಿ, ನಯನತಾರಾ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ. ಆದರೆ ಮದುವೆಯಾಗಲು ನಿರ್ಧರಿಸಿದಾಗ ಅಭಿಮಾನಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಫೆಬ್ರವರಿ 14 ರಂದು, ವಿಘ್ನೇಶ್ ಶಿವನ್ ಅವರು ಇನ್ಸ್ಟಾಗ್ರಾಂ ರೀಲ್ ಅನ್ನು ಶೇರ್ ಮಾಡಿದ್ದಾರೆ. ನಯನತಾರಾ ಪುಷ್ಪಗುಚ್ಛದೊಂದಿಗೆ ಶಿವನ್ ಅವರನ್ನ ಆಶ್ಚರ್ಯಗೊಳಿಸುವುದನ್ನು ಕಾಣಬಹುದು.
ವಿಘ್ನೇಶ್ ಶಿವನ್ ಅವರ ಮುಂದಿನ ಚಿತ್ರ ಕಾತುವಾಕುಲ ಎರಡು ಕಾದಲ್. ರೊಮ್ಯಾಂಟಿಕ್ ಕಾಮಿಡಿಯನ್ನು ವಿಘ್ನೇಶ್ ಮತ್ತು ನಯನತಾರಾ ತಮ್ಮ ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ನಯನತಾರಾ, ವಿಜಯ್ ಸೇತುಪತಿ ಮತ್ತು ಸಮಂತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾತುವಾಕುಲ ಎರಡು ಕಾದಲ್ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಬೇಕಿದೆ.