Nayanthara | ಅರ್ಧರಾತ್ರಿ ವಿಘ್ನೇಶ್ ಗೆ ನಯನತಾರಾ ಸರ್ಪ್ರೈಸ್ ಗಿಫ್ಟ್ nayanthara-surprise-gift-vignesh-shivan saaksha tv
ಸಾಧಾರಣ ದಿನಗಳಲ್ಲಿ ಪ್ರೀತಿಯನ್ನ ವಿನಿಯಮ ಮಾಡಿಕೊಳ್ಳುವ ಪ್ರೇಮಿಗಳು, ಪ್ರೇಮಿಗಳ ದಿನದಂದು ಒಬ್ಬರಿಗೊಬ್ಬರು ಗಿಫ್ಟ್ ಗಳನ್ನ ಕೊಡುತ್ತಾರೆ.
ಇಲ್ಲವಾದಲ್ಲಿ ಒಟ್ಟಾಗಿ ಕಾಲ ಕಳೆಯುತ್ತಾರೆ. ಆ ದಿನವೆಲ್ಲವನ್ನೂ ಒಟ್ಟಾಗಿ ಕಳೆದು ಮಧುರ ನೆನಪಾಗಿಟ್ಟುಕೊಳ್ಳುತ್ತಾರೆ.
ಪ್ರೇಮ ಪತ್ರ, ಪುಷ್ಪ ಗುಚ್ಚ, ಟೆಡ್ಡಿ, ಚಾಕಲೇಟ್ಸ್, ಗಿಫ್ಟ್, ಟ್ರಿಪ್ಸ್ ಹೀಗೆ ಎಲ್ಲಾ ರೀತಿಯಲ್ಲೂ ಪ್ರೀತಿಯನ್ನ ವಿನಿಯಮ ಮಾಡಿಕೊಳ್ಳುತ್ತಾರೆ.
ಅದರಂತೆ ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ನಯನ ತಾರಾ ತನ್ನ ಲವರ್ ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.
ಮಧ್ಯರಾತ್ರಿಯಲ್ಲಿ ಗೆಳೆಯ ವಿಘ್ನೇಶ್ ಶಿವನ್ ಗೆ ಪುಷ್ಪಗುಚ್ಛವನ್ನು ನೀಡಿ ಪ್ರೀತಿಯ ಅಪ್ಪುಗೆಯಲ್ಲಿ ಬಂಧಿಸಿದ್ದಾರೆ ನಯನತಾರಾ.
ಇದರೊಂದಿಗೆ ವಿಘ್ನೇಶ್ ಕೂಡ ಗೆಳತಿಯ ಹಣೆಗೆ ಮುತ್ತಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತ್ತೊಂದು ಪೋಸ್ಟ್‌ನಲ್ಲಿ ವಿಘ್ನೇಶ್ ಶಿವನ್ .. ‘ಎಲ್ಲ ಆತ್ಮೀಯರಿಗೆ ಪ್ರೇಮಿಗಳ ದಿನದ ಶುಭಾಶಯಗಳು. ಪ್ರೀತಿ ಮಾತ್ರ ಜೀವನವನ್ನು ಪರಿಪೂರ್ಣವಾಗಿಸುತ್ತದೆ!
ಆದ್ದರಿಂದ ಪ್ರೀತಿಯನ್ನು ಪ್ರೀತಿಸಲು ಅಥವಾ ಆನಂದಿಸಲು ಸಮಯ ತೆಗೆದುಕೊಳ್ಳಿ. ಆಸಕ್ತಿ ತೋರಿಸಿ’ ಎಂದು ನಯನತಾರಾ ಜೊತೆ ಇಳಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.