Sandalwood : ‘ಲವ್ಲಿ’ 20 ವರ್ಷದ ಜರ್ನಿ ಮುಗಿಸಿದ ಪ್ರೇಮ್..!!
ಚಂದನವನದ ಲವ್ಲಿ ಸ್ಟಾರ್ ಪ್ರೇಮ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಇಂದಿಗೆ 20 ವರ್ಷ…. ಇದೇ ಖುಷಿಯಲ್ಲಿರುವ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
2004ರಲ್ಲಿ ಪ್ರಾಣ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ನಾಯಕನಾಗಿ ಎಂಟ್ರಿ ಕೊಟ್ಟ ಪ್ರೇಮ್ ಅವರಿಗೆ ಬ್ರೇಕ್ ತಂದು ಕೊಟ್ಟಿದ್ದು ಅವರ ಸೂಪರ್ ಹಿಟ್ ಸಿನಿಮಾ ನೆನಪಿರಲಿ..
ನಂತರ ದಿನಾಕರ್ ತೂಗ್‍ದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಜೊತೆ ಜೊತೆಯಲಿ ಸಿನಿಮಾ ಕೂಡ ಅವರ ವೃತ್ತಿ ಜೀವನದ ದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿತ್ತು.. ಈ ಸಿನಿಮಾದಲ್ಲಿ ಅವರೊಂದಿಗೆ ರಮ್ಯಾ ಬಣ್ಣ ಹಚ್ಚಿದ್ದರು.
ನಂತರ ಸಾಕಷ್ಟು ಸಿನಿಮಾಗಳಲ್ಲಿ ಅವರು ಬಣ್ಣಹಚ್ಚಿದರು.. ಪಲ್ಲಕ್ಕಿ, ಗುಣವಂತ, ಇತ್ತೀಚೆಗೆ ಪ್ರೇಮಮ್ ಪೂಜ್ಯಂ ಹೀಗೆ 26 ಸಿನಿಮಾಗಳಲ್ಲಿ ನಟಿಸಿದ್ದಾರೆ… ಇದೀಗ ಸಿನಿಮಾರಂಗಕ್ಕೆ ಅವರು ಕಾಲಿಟ್ಟು 20 ತುಂಬಿದೆ..
ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.. ಫೋಟೋದಲ್ಲಿ ಪ್ರೇಮ್ ಹಿಂದೆ ಲವ್ಲಿ 20 ಇಯರ್ಸ್ ಎಂದಿದೆ.. 20 ವರುಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ, ಮಾಧ್ಯಮಕ್ಕೆ, ಸ್ನೇಹಿತರಿಗೆ ಹಾಗೂ ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ವಂದನೆಗಳು. ನಿಮ್ಮ ಪ್ರೀತಿ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ. ಸದಾ ನೆನಪಿರಲಿ ಪ್ರೇಮ್ ಎಂದು ಫೋಟೋ ಕೆಳಗೆ ಬರೆಯಲಾಗಿದೆ.
ಅಲ್ಲದೇ ಲವ್ಲಿಯಾಗಿ ಕ್ಯಾಪ್ಷನ್ ಕೊಟ್ಟಿರುವ ಲವ್ಲಿ ಸ್ಟಾರ್ ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ..