ನೇಪಾಳ: ಕೆ.ಪಿ ಶರ್ಮಾ ಓಲಿಗೆ ಮುಖಭಂಗ – ಶೇರ್ ಬಹದ್ದೂರ್ ನೂತನ ಪ್ರಧಾನಿ..!
ನೇಪಾಳ ರಾಜಕೀಯ ಬಿಕ್ಕಟ್ಟು ವಿಚಾರದಲ್ಲಿ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಭಾರಿ ಮುಖಭಂಗವಾಗಿದ್ದು, ಶೇರ್ ಬಹದ್ದೂರ್ ದೇವುಬಾ ಅವರನ್ನೇ ಪುನಃ ಪ್ರಧಾನಿಯನ್ನಾಗಿ ನೇಮಿಸುವಂತೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ನೇಪಾಳಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಕ ಮಾಡುವಂತೆ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರಿಗೆ ನೇಪಾಳದ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದ್ರಿಂದಾಗಿ ಕೆಪಿ ಓಲಿಗೆ ಬಾರೀ ಮುಖಭಂಗವಾಗಿದೆ..
ಅಂದ್ಹಾಗೆ ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ ಕೆಲ ದಿನಗಳ ಹಿಂದೆಷ್ಟೇ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದರು. ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. 275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಓಲಿ ಸೋಲನ್ನನುಭವಿಸಿದ ನಂತರವೂ ಕೂಡ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಅವರ ಅಧಿಕಾರ ಮತ್ತೆ ಕೈತಪ್ಪುತ್ತಿದೆ. ಇನ್ನೂ ಸುಪ್ರೀಂ ಆದೇಶದ ಬೆನ್ನಲ್ಲೇ ನೇಪಾಳದ ವಿರೋಧ ಪಕ್ಷದ ನಾಯಕ ಶೇರ್ ಬಹದ್ದೂರ್ ದೇವುಬಾ ಅವರು ಮಂಗಳವಾರ ಕಡಿಮೆ ಸಂಖ್ಯೆಯ ಸಚಿವರನ್ನು ಒಳಗೊಂಡಂತೆ ಚಿಕ್ಕ ಗಾತ್ರದ ಸಂಪುಟ ರಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ.
“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ” : ಕೋಟಾ ಶ್ರೀನಿವಾಸ್ ರಾವ್
ದೇವುಬಾ ಅವರು ಮಂಗಳವಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಳು ಮಂದಿ ಸದಸ್ಯರ ಸಣ್ಣ ಸಂಪುಟ ರಚಿಸುವ ಸಾಧ್ಯತೆಗಳಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.. ಇನ್ನೂ ನಾವು ಆರಂಭದಲ್ಲಿ ಚಿಕ್ಕ ಗಾತ್ರದ ಸಂಪುಟ ರಚಿಸಲು ನಿರ್ಧರಿಸಿದ್ದೇವೆ ಎಂದು ಎನ್‌ಸಿಯ ಮುಖ್ಯ ಸಚೇತಕ ಬಾಲ್ ಕೃಷ್ಣ ಖಾಂಡ್ ಅವರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ರಚಿಸಲು ಇಚ್ಛಿಸುತ್ತೇವೆ. ಇದಕ್ಕಾಗಿ ದೇವುಬಾ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮೈತ್ರಿ ಪಕ್ಷಗಳಿಗೆ ಕೇಳಿದ್ದೇವೆ ಮಾಹಿತಿ ನೀಡಿದ್ದಾರೆ.
ಇನ್ನೂ ನೇಪಾಳದ ಹಾಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಷ್ಟ್ರಪತಿ ವಿದ್ಯಾ ಭಂಡಾರಿ ಅವರು ಐದು ತಿಂಗಳಲ್ಲಿ ಎರಡು ಬಾರಿ ಸಂಸತ್ತಿನ ಕೆಳಮನೆ ವಿಸರ್ಜಿಸಿದ್ದರು. ಸಂಸತ್ತಿನ ವಿಸರ್ಜನೆಯ ನಂತರ, ನವೆಂಬರ್ 12 ಮತ್ತು 19 ರಂದು ಮಧ್ಯಂತರ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಲಾಗಿತ್ತು. ಚುನಾವಣೆಗೆ ಸಂಬಂಧಿಸಿದನೆ ಹಾಗೂ ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ನೇಪಾಳದ ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು 30 ಅರ್ಜಿಗಳನ್ನು ದಾಖಲಿಸಲಾಗಿದ್ದವು. ರಾಷ್ಟ್ರಪತಿಗಳ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ವಿರೋಧ ಪಕ್ಷಗಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ, ಸಂಸತ್ತಿನ ಕೆಳಮನೆ ವಿಸರ್ಜಿಸಲು ರಾಷ್ಟ್ರಪತಿಗಳ ಆದೇಶವನ್ನು ರದ್ದುಪಡಿಸಬೇಕು ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದು ಕೋರಲಾಗಿತ್ತು. ಪ್ರತಿಪಕ್ಷಗಳು ಸಲ್ಲಿಸಿದ್ದ ಈ ಅರ್ಜಿಗೆ 146 ಸಂಸದರು ಸಹಿ ಹಾಕಿದ್ದರು. ಈ ಮೂಲಕ ಕೇವಲ 5 ತಿಂಗಳಲ್ಲಿ 2 ಬಾರಿಗೆ ಸರ್ಕಾರ ವಿಸರ್ಜನೆಯಾದಂತಾಗಿದೆ.
ಜನ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ – ಮೋದಿ