ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ | ಬೆಂಗಳೂರು ವಿವಿಯಲ್ಲಿ 30 ಹೊಸ ಕೋರ್ಸ್ Bengaluru saaksha tv
ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 30 ಹೊಸ ಕೋರ್ಸ್ ಗಳನ್ನ ಆರಂಭಿಸಲಾಗಿದೆ.
ಹೊಸ ಕೋರ್ಸ ಗಳ ವಿವರ ಹೀಗಿದೆ…
ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಅಡಿಯಲ್ಲಿ ಬಯೋ ಇನ್ಫರ್ಮೇಷನ್ ಅಂಡ್ ಬಯೋಟೆಕ್ನಾಲಜಿ, ಹ್ಯೂಮನ್ ಡಿಸೀಸ್ ಜೆನೆಟಿಕ್ಸ್, ಆಹಾರ ಮತ್ತು ಪೌಷ್ಠಿಕಾಂಶ, ಅರ್ಥಶಾಸ್ತ್ರ, ಘನತಾಜ್ಯ ನಿರ್ವಹಣೆ, ಫಿಲ್ಮ್ ಮೇಕಿಂಗ್, ಗ್ರಾಫಿಕ್ಸ್ ಮತ್ತು ಆನಿಮೇಷನ್, ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್, ವಿಪತ್ತು ನಿರ್ವಹಣೆ ಮತ್ತು ಮೆಡಿಸಿನಲ್ ಬಾಟನಿ.
ಎಂ.ಎ ವಿಭಾಗದಲ್ಲಿ ಟಿಬೆಟಿಯನ್ ಲಿಟರೇಚರ್, ಟಿಬೆಟಿಯನ್ ಲ್ಯಾಂಗ್ವೇಜ್, ಬುದ್ಧಿಸ್ಟ್ ಫಿಲಾಸಫಿ, ಟಿಬೆಟಿಯನ್ ಇತಿಹಾಸ, ಅಡ್ವರ್ಟೈಸಿಂಗ್ ಆಂಡ್ ಪಬ್ಲಿಕ್ ರಿಸರ್ಚ್, ಇಂಟರ್ ಡಿಸಿಪ್ಲಿನರಿ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರಿಸರ್ಚ್, ಮೀಡಿಯಾ ಮ್ಯಾನೇಜ್ಮೆಂಟ್ ಕೋರ್ಸ್ಗಳು.
ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಡಿಯಲ್ಲಿ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ, ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ಇನ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಒಡಿಸ್ಸಿ, ಪ್ರಮಾಣಪತ್ರ ಕೋರ್ಸ್ ನಲ್ಲಿ ರಿಸರ್ಚ್ ಮೆಥಡ್ ಇನ್ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಟೆಕ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ,ಆಡಿಟರಿ ವರ್ಬಲ್ ಥೆರಪಿ ಕೋರ್ಸ್, ಫಿಲ್ಮ್ ಆಕ್ಟಿಂಗ್, ಥಿಯೇಟರ್ ಆಟ್ರ್ಸ್, ಫಿಲ್ಮ್ ಮೇಕಿಂಗ್, ಕೃಷಿ ನಿರ್ವಹಣೆ, ಪ್ರೊಫೆಷನ್ ಡಿಪ್ಲೊಮಾ ವಿಭಾಗದಲ್ಲಿ ಭರತನಾಟ್ಯಂ, ಸೈಬರ್ ಸೆಕ್ಯೂರಿಟಿ, ಸುಸ್ಥಿರ ಆರ್ಕಿಟೆಕ್ಚರ್, ಇಂಟರ್ನೆಟ್ ಆಫ್ ಥಿಂಗ್ಸ್ ಕೋರ್ಸ್ಗಳು.